ಕರ್ನಾಟಕ

ಹಿರಿಯ ಕ್ರೀಡಾ ಪತ್ರಕರ್ತ ಡಿ.ಗರುಡ ನಿಧನ

ಬೆಂಗಳೂರು,ನ.8-ಹಿರಿಯ ಕ್ರೀಡಾ ಪತ್ರಕರ್ತ ದಿಗಂಬರ ಯೋಗೇಶ ಗರುಡ (45) ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಸುಮಾರು ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ನಿನ್ನೆ ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಗದುಗಿನ ಖ್ಯಾತ ನಾಟಕಕಾರ ಗರುಡ ಸದಾಶಿವರಾಯರ ಮೊಮ್ಮಗನಾಗಿದ್ದ ಡಿ.ಗರುಡ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರದಲ್ಲಿ ಪದವಿ ಪಡೆದಿದ್ದರು.

ಸುಪ್ರಭಾತ ವಾಹಿನಿಯಲ್ಲಿ ಪತ್ರಿಕೋದ್ಯಮ ವೃತ್ತಿಗೆ ಕಾಲಿಟ್ಟಿದ್ದ ಅವರು ಬಳಿಕ ಪ್ರಜಾವಾಣಿ ಪತ್ರಿಕೆಯಲ್ಲಿ 12 ವರ್ಷ ಕ್ರೀಡಾ ವರದಿಗಾರರಾಗಿ, ವಿಜಯ ಕರ್ನಾಟಕದಲ್ಲಿ ಕ್ರೀಡಾ ಸಂಪಾದಕರಾಗಿ ಎರಡು ವರ್ಷ ಕೆಲಸ ಮಾಡಿದ್ದರು. ಬಳಿಕ ಸಿಡ್ನಿ ರೇಡಿಯೋಗೆ ಅರೆಕಾಲಿಕ ವರದಿಗಾರರಾಗಿದ್ದರು.

ಸುದ್ದಿವಾಹಿನಿಗಳು ಮತ್ತು ಆಕಾಶವಾಣಿಯ ಚರ್ಚಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು, ಭರತನಾಟ್ಯ ನೃತ್ಯಪಟು ಹಾಗೂ ರಂಗಕಲಾವಿದರು ಆಗಿದ್ದರು.

ಯೋಗೇಶ ಗರುಡ ಅವರು ಪತ್ನಿ ಶೋಭಾ ಲೋಕನಾಥ್ ಮತ್ತು ಮಗಳು ತಪಸ್ಯಾ (5) ಅವರನ್ನು ಅಗಲಿದ್ದಾರೆ. (ಎಂ.ಎನ್)

Leave a Reply

comments

Related Articles

error: