ಪ್ರಮುಖ ಸುದ್ದಿಮೈಸೂರು

ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಲು ರಾಷ್ಟ್ರಪತಿ ಬಳಿ ತೆರಳಲಿದ್ದೇವೆ : ಮಾಜಿ ಸಿಎಂ ಸಿದ್ದರಾಮಯ್ಯ

ಮೈಸೂರು,ನ.8:- ರಾಜ್ಯದಲ್ಲಿ ಅಧಿಕಾರದಲ್ಲಿರುವ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವನ್ನು ವಜಾಗೊಳಿಸುವಂತೆ ಮನವಿ ಸಲ್ಲಿಸಲು ರಾಷ್ಟ್ರಪತಿಯವರಲ್ಲಿಗೆ ತೆರಳಲಿದ್ದೇವೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಅವರಿಂದು ಮೈಸೂರಿಗೆ ಆಗಮಿಸಿದ್ದು, ಮೈಸೂರಿನಲ್ಲಿ  ರಾಷ್ಟ್ರಪತಿಗಳ ಭೇಟಿಗೆ ಯಾಕೆ ಹೋಗುತ್ತಿದ್ದೀರೆಂಬ  ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಯಡಿಯೂರಪ್ಪನವರ ಆಡಿಯೋ ಹಗರಣ ಎಲ್ಲರಿಗೂ ತಿಳಿದಿದೆ. ರಾಷ್ಟ್ರಪತಿಯವರು ಅಪಾಯಿಂಟ್ ಮೆಂಟ್ ಕೊಟ್ಟ ನಂತರ ಅವರ ಬಳಿ ತೆರಳಿ ಮನವಿ ಸಲ್ಲಿಸಲಾಗುವುದು. ಅಮಿತ್ ಶಾ ಅವರಿಗೆ ಕೂಡ ಗೃಹ ಸಚಿವರಾಗಿ ಮುಂದುವರಿಯುವ ಯಾವುದೇ ನೈತಿಕ ಹಕ್ಕಿಲ್ಲ ಎಂದರು. ಅಮಿತ್ ಶಾ ಅವರೇ ಎರಡು ತಿಂಗಳು ಹದಿನೇಳು ಶಾಸಕರನ್ನು ಮುಂಬೈನಲ್ಲಿ ನೋಡಿಕೊಂಡಿದ್ದರು. ಪಕ್ಷಾಂತರಕ್ಕೆ ಅವರದ್ದೇ ಕುಮ್ಮಕ್ಕು. ಅವರ ಆದೇಶದ ಮೇಲೆ ಮಾಡಿದ್ದೇನೆ ಎಂದು ಯಡಿಯೂರಪ್ಪ ತಿಳಿಸಿದ್ದಾರೆ. ಇದು ಅನೈತಿಕ ಸರ್ಕಾರ. ಪ್ರಜಾಪ್ರಭುತ್ವ ವಿರೋಧಿ ಸರ್ಕಾರ. ಸಂವಿಧಾನಕ್ಕೆ ವಿರುದ್ಧವಾದ ಸರ್ಕಾರ ಎಂದು ಕಿಡಿಕಾರಿದರು.

ಪಕ್ಷಾಂತರ ನಿಷೇಧ ಕಾಯಿದೆ ಮಾಡಿದ್ಯಾಕೆ? ಆಯಾ ರಾಮ್, ಗಯಾ ರಾಮ್ ನಿಲ್ಲಿಸಲಿಕ್ಕೆ. ಪಕ್ಷಾಂತರ ಮಾಡಬಾರದು. ಒಂದು ಪಕ್ಷದಲ್ಲಿ ನಿಷ್ಠರಾಗಿ ಇರಬೇಕು. ಕೇಮದ್ರದ ಮಂತ್ರಿಯಾಗಿ, ರಾಷ್ಟ್ರೀಯ ಪಕ್ಷದ ಅಧ್ಯಕ್ಷರಾಗಿದ್ದವರೇ ಅದನ್ನು ಉಲ್ಲಂಘಿಸಲಿಕ್ಕೆ ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: