ದೇಶ

ಜಮ್ಮು-ಕಾಶ್ಮೀರ: ಉಗ್ರರ ಗುಂಡಿಗೆ ಬೆಳಗಾವಿಯ ಯೋಧ ಹುತಾತ್ಮ

ನವದೆಹಲಿ,ನ.8-ಜಮ್ಮು-ಕಾಶ್ಮೀರದಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಬೆಳಗಾವಿಯ ಯೋಧ ಹುತಾತ್ಮರಾಗಿದ್ದಾರೆ.

ಬೆಳಗಾವಿಯ ಉಚಗಾಂವ ಗ್ರಾಮದ ರಾಹುಲ್ ಸುಳಗೇಕರ (22) ಹುತಾತ್ಮರಾದ ಯೋಧ. ಜಮ್ಮುವಿನ ಪುಂಚ್ ಬಳಿ ಉಗ್ರರೊಂದಿಗೆ ಸೆಣಸಾಡುವಾಗ ಗುಂಡು ತಗುಲಿ ಹುತಾತ್ಮನಾಗಿದ್ದಾರೆ.

ಜಮ್ಮುವಿನ 4ನೇ ಮರಾಠ ಯೂನಿಟ್ನಲ್ಲಿ ರಾಹುಲ್ ಕರ್ತವ್ಯದಲ್ಲಿದ್ದರು. ರಾಹುಲ್ ಎಂಎಲ್ಐಆರ್ಸಿಯಲ್ಲಿ ತರಬೇತಿ ನಡೆಸಿದ್ದರು. ನಾಲ್ಕು ವರ್ಷಗಳ ಹಿಂದೆ ಭಾರತೀಯ ಸೈನ್ಯ ಸೇರಿದ್ದರು. ರಾಹುಲ್ ರಜೆಯ ಮೇಲೆ ಗಣೇಶ ಉತ್ಸವ ವೇಳೆ ತವರಿಗೆ ಬಂದು ಕರ್ತವ್ಯಕ್ಕೆ ಹಿಂದಿರುಗಿದ್ದರು.

ರಾಹುಲ್ ಅಣ್ಣ ಮಯೂರ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ರಾಹುಲ್ಅವರ ತಂದೆ ಭೈರು ಸುಳಗೇಕರ ಸಹ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. (ಎಂ.ಎನ್)

Leave a Reply

comments

Related Articles

error: