ಕ್ರೀಡೆಪ್ರಮುಖ ಸುದ್ದಿ

ವಿವಾಹದ ವಿಶೇಷ ಕ್ಷಣ ತೊರೆದು ಪಂದ್ಯ ವೀಕ್ಷಿಸಿದ ಪಾಕ್ ಕ್ರಿಕೆಟ್ ಅಭಿಮಾನಿ :  ಫೋಟೋ ವೈರಲ್

ದೇಶ(ನವದೆಹಲಿ)ನ.8:-   ಕ್ರಿಕೆಟ್ ಅಭಿಮಾನಿಗಳ ಕ್ರಿಕೆಟ್ ಮೇಲಿನ ವ್ಯಾಮೋಹ ಕಿಂಚಿತ್ತೂ  ಕಡಿಮೆಯಾಗಿಲ್ಲ. ಇತ್ತೀಚೆಗೆ, ಅಭಿಮಾನದ ಪರಾಕಾಷ್ಠೆಯ ಕುರಿತು ಸುದ್ದಿಯಾಗಿತ್ತು.  ಇದನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಮತ್ತಷ್ಟು ಪ್ರಸಿದ್ಧಗೊಳಿಸಿದೆ. ಈ ಅಭಿಮಾನಿ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವೆ ನಡೆಯುತ್ತಿರುವ ಕ್ರಿಕೆಟ್ ಪಂದ್ಯಕ್ಕಾಗಿ ತಮ್ಮ ಮೊದಲ ರಾತ್ರಿಯನ್ನೇ ತೊರೆದಿದ್ದು,  ಪಂದ್ಯವನ್ನು ನೋಡುತ್ತಿರುವ ಅವರ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಈ ಚಿತ್ರವನ್ನು ಐಸಿಸಿ ಹಂಚಿಕೊಂಡ ನಂತರ ಆ ಫೋಟೋ ಸಖತ್ ವೈರಲ್ ಆಗಿದೆ.

ವಾಸ್ತವವಾಗಿ ಈ ಅಭಿಮಾನಿ ಪಾಕಿಸ್ತಾನದವರು. ಆದರೆ ಈ ಸಮಯದಲ್ಲಿ ಅಮೆರಿಕದಲ್ಲಿ ವಾಸಿಸುತ್ತಿದ್ದಾರೆ. ಹಸನ್ ತಸ್ಲೀಮ್ ಎಂಬ ಈ ಅಭಿಮಾನಿ ಎಂದಿಗೂ ಒಂದು ಪಂದ್ಯವನ್ನು ಮಿಸ್ ಮಾಡಿಲ್ಲವಂತೆ. ಆದರೆ ಕಾಕತಾಳೀಯವಾಗಿ   ಅವರ ಮದುವೆಯ ದಿನದಂದು ಪಾಕ್  ಮತ್ತು ಆಸ್ಟ್ರೇಲಿಯಾ  ಪಂದ್ಯವನ್ನು ನಡೆದಿದ್ದು,  ಹಸನ್ ತಸ್ಲೀಮ್  ಪಂದ್ಯ ವೀಕ್ಷಿಸುವುದನ್ನು ಮಾತ್ರ ಮಿಸ್ ಮಾಡಲಿಲ್ಲ. ಪಂದ್ಯ ನೋಡುತ್ತಲೇ ಮದುವೆಯಾಗುವುದನ್ನು ಕೂಡ  ತಪ್ಪಿಸಲಿಲ್ಲ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ಹಸನ್ ವಿವಾಹದ ಎಲ್ಲಾ ಆಚರಣೆಗಳನ್ನು ಪುರ್ಣಗೊಳಿಸಿದ್ದು,  ವಧುವಿನೊಂದಿಗೆ ತನ್ನ ಮನೆಗೆ ಬಂದಾಗ   ಸಂಬಂಧಿಗಳು ಸ್ವಾಗತಿಸುತ್ತಿದ್ದಾಗಲೂ ಪಂದ್ಯ ನಡೆಯುತ್ತಿತ್ತು.   ಹಸನ್ ಈ ಅವಕಾಶ ಕೂಡ ಕಳೆದುಕೊಳ್ಳದೆ ಪಂದ್ಯವನ್ನು ವೀಕ್ಷಿಸಲು ಕುಳಿತರು. ಹಸನ್ ಈ ಚಿತ್ರವನ್ನು ಸೋಶಿಯಲ್ ಮೀಡಿಯಾದಲ್ಲಿ  ಹಂಚಿಕೊಂಡಿದ್ದು,  ಇಂದು ನನ್ನ ಮೊದಲ ರಾತ್ರಿ, ಆದರೆ    ಪಂದ್ಯವನ್ನು ಮಿಸ್ ಮಾಡಲು  ಬಯಸುವುದಿಲ್ಲ ಎಂಬ ಶೀರ್ಷಿಕೆಯೊಂದಿಗೆ  ಹಸನ್ ತನ್ನ ಮತ್ತು ಪತ್ನಿಯ ಚಿತ್ರವನ್ನು   ಹಂಚಿಕೊಂಡಿದ್ದಾರೆ. ಅದರಲ್ಲಿ ಅವರ ಸಂಬಂಧಿಕರು ಸಹ ಕಾಣಿಸುತ್ತಾರೆ. ಈ ಚಿತ್ರದಲ್ಲಿ  ಟಿವಿಯ ಹಿಂಭಾಗದಲ್ಲಿದ್ದು ಪಂದ್ಯ ನಡೆಯುತ್ತಿದೆ.  ಈ ಫೋಟೋವನ್ನು ಐಸಿಸಿ ಇಷ್ಟಪಟ್ಟಿದ್ದು,  ಐಸಿಸಿ ದಂಪತಿಗಳನ್ನು ಕಾಮೆಂಟ್ಗಳಲ್ಲಿ ಟ್ಯಾಗ್ ಮಾಡಿ, “ನಮಗೆ ಈ ಸಂದೇಶವನ್ನು ಅಮೆರಿಕದ ಅಭಿಮಾನಿಯೊಬ್ಬರು ಕಳುಹಿಸಿದ್ದಾರೆ. ಇದೇ ಪ್ರೀತಿ ಎಂದು  ಬರೆದುಕೊಂಡಿದೆ.

ಈ ಪಂದ್ಯದಲ್ಲಿ ಆಸ್ಟ್ರೇಲಿಯಾವು ಪಾಕಿಸ್ತಾನವನ್ನು ಏಳು ವಿಕೆಟ್‌ಗಳಿಂದ ಸೋಲಿಸಿತ್ತು ಮತ್ತು ಸರಣಿಯಲ್ಲಿ ಅಜೇಯ 1-0 ಮುನ್ನಡೆ ಸಾಧಿಸಿತ್ತು.   (ಎಸ್.ಎಚ್)

Leave a Reply

comments

Related Articles

error: