ಕ್ರೀಡೆ

ಚೀನಾ ಓಪನ್  ಬ್ಯಾಡ್ಮಿಂಟನ್ ಟೂರ್ನಿ: ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್-ಚಿರಾಗ್ ಜೋಡಿ

ಫ್ಯೂಜೊ,(ಚೀನಾ)-.8- ಚೀನಾ ಓಪನ್  ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ತಾರಾ ಡಬಲ್ಸ್ ಪಟುಗಳಾದ  ಸಾತ್ವಿಕ್ ಸಾಯ್ ರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಜೋಡಿ ಸೆಮಿಫೈನಲ್ ಪ್ರವೇಶಿಸಿದೆ.

ಇಂದು ನಡೆದ ಪುರುಷ ಡಬಲ್ಸ್ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸಾತ್ವಿಕ್-ಚಿರಾಗ್ ಜೋಡಿ ಸ್ಥಳೀಯ ಫೇವರಿಟ್ಗಳಾದ ಲೀ ಜುನ್ ಹೂಯಿ ಮತ್ತು ಲಿಯೂ ಯೂ ಚೆನ್ ವಿರುದ್ಧ 21-19, 21-15 ನೇರ ಸೆಟ್ನಲ್ಲಿ ಗೆದ್ದು ಸೆಮಿಫೈನಲ್ ಗೆ ಲಗ್ಗೆಯಿಟ್ಟರು.

ಇದೀಗ ಶನಿವಾರ ನಡೆಯಲಿರುವ ಸೆಮಿಫೈನಲ್ ಮುಖಾಮುಖಿಯಲ್ಲಿ ಇಂಡೋನೇಷ್ಯಾದ ವಿಶ್ವ ನಂ.1 ಜೋಡಿಯಾದ ಮಾರ್ಕಸ್ ಫೆರ್ನಾಲ್ಡಿ ಗಿಡಿಯಾನ್ ಹಾಗೂ ಕೆವಿನ್ ಸಂಜಯ ಸುಕಮುಲ್ಜೊ ಸವಾಲನ್ನು ಎದುರಿಸಲಿದ್ದಾರೆ.

ಕಳೆದ ತಿಂಗಳು ಫ್ರೆಂಚ್ ಓಪನ್ ಫೈನಲ್ನಲ್ಲಿ ಇದೇ ಜೋಡಿಯ ವಿರುದ್ಧ ಭಾರತೀಯ ಜೋಡಿ ಸೋಲಿಗೆ ಶರಣಾಗಿತ್ತು. ಇದೀಗ ಸೇಡು ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.

ಇದು ಪ್ರಸಕ್ತ ಸಾಲಿನಲ್ಲಿ ಚೀನಾದ ವಿಶ್ವ ನಂ.3 ಜೋಡಿ ವಿರುದ್ಧ ಎದುರಾದ ಮೂರನೇ ಮುಖಾಮುಖಿಯಾಗಿತ್ತು. ಸಾತ್ವಿಕ್ಚಿರಾಗ್ ಜೋಡಿಯು ಥಾಯ್ಲೆಂಡ್ ಓಪನ್ನಲ್ಲಿ ಗೆಲುವು ದಾಖಲಿಸಿದರೆ ಆಸ್ಟ್ರೇಲಿಯಾ ಓಪನ್ನಲ್ಲಿ ಮುಗ್ಗರಿಸಿತ್ತು.

ಆಗಸ್ಟ್ ತಿಂಗಳಲ್ಲಿ ಥಾಯ್ಲೆಂಡ್ ಸೂಪರ್ 500 ಟೂರ್ನಮೆಂಟ್ ಗೆದ್ದ ಸಾತ್ವಿಕ್ಚಿರಾಗ್ ಜೋಡಿಯು ವಿಶ್ವ ದಾಖಲೆಯನ್ನು ಬರೆದಿತ್ತು. ಬಳಿಕ ಕಳೆದ ತಿಂಗಳು ಫ್ರೆಂಚ್ ಓಪನ್ನಲ್ಲಿ ಫೈನಲ್ ತಲುಪಿ ರನ್ನರ್ಅಪ್ ಪ್ರಶಸ್ತಿಯನ್ನು ಗೆದಿದ್ದರು. (ಎಂ.ಎನ್)

Leave a Reply

comments

Related Articles

error: