ಪ್ರಮುಖ ಸುದ್ದಿಮನರಂಜನೆ

‘ಕೌನ್ ಬನೇಗಾ ಕರೋಡ್ ಪತಿ‘ ಕಾರ್ಯಕ್ರಮ ವಿರುದ್ಧ ಘೋಷಣೆ : ತಪ್ಪಾಗಿದ್ದೆಲ್ಲಿ?

ದೇಶ(ನವದೆಹಲಿ)ನ.8:-  ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷದ(ಎನ್ ಸಿಪಿ) ಕಾರ್ಯಕರ್ತರು ಬಾಲಿವುಡ್ ನಟ ಮತ್ತು ‘ಕೌನ್ ಬನೇಗಾ ಕರೋಡ್ ಪತಿ (ಕೆಬಿಸಿ)’ ಕಾರ್ಯಕ್ರಮದ ಹೋಸ್ಟ್  ಅಮಿತಾಬ್ ಬಚ್ಚನ್ ಮತ್ತು ಕೆಬಿಸಿ ಕಾರ್ಯಕ್ರಮದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಏತನ್ಮಧ್ಯೆ, ಮುಂಬೈನ ಖಾಸಗಿ ಚಾನೆಲ್ ಕಚೇರಿಯ ಹೊರಗೆ, ಕಾರ್ಯಕರ್ತರು ಒಳಗೆ ಹೋಗದಂತೆ ಪೊಲೀಸರು ತಡೆದಿದ್ದಾರೆ. ಖಾಸಗಿ ಚಾನೆಲ್ ಕಚೇರಿಯ ಹೊರಗೆ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ಇರಿಸಲಾಗಿದೆ.

ಕೆಬಿಸಿಯಲ್ಲಿ ಶಿವಾಜಿ ಮಹಾರಾಜ್ ಹೆಸರನ್ನು ಅವಮಾನಿಸಿದ್ದರಿಂದ ಈ ಪ್ರತಿಭಟನೆಯನ್ನು ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ ನಡೆಸುತ್ತಿದೆ. ವಾಸ್ತವವಾಗಿ, ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರನ್ನು ಕೆಬಿಸಿ ಕಾರ್ಯಕ್ರಮದಲ್ಲಿ ಶಿವಾಜಿ ಎಂದು ಮಾತ್ರ ತೆಗೆದುಕೊಳ್ಳಲಾಗಿದೆ. ನವೆಂಬರ್ 6 ರ ಕೆಬಿಸಿಯ ಸಂಚಿಕೆಯಲ್ಲಿ, ಪ್ರಶ್ನೆಯನ್ನು ಕೇಳಲಾಗಿದ್ದು,  ಮೊಘಲ್ ದೊರೆ ಜೌರಂಗಜೇಬನ ಸಮಕಾಲೀನರು ಯಾರು ? ಮಹಾರಾಣಾ ಪ್ರತಾಪ್, ರಾಣಾ ಸಂಗಾ, ಮಹಾರಾಜ ರಂಜಿತ್ ಸಿಂಗ್ ಮತ್ತು ‘ಶಿವಾಜಿ’ ಎಂದು ಆಯ್ಕೆಯಲ್ಲಿ ಬರೆಯಲಾಗಿತ್ತು. ಇದು ಜನರ ಭಾವನೆಗಳನ್ನು ನೋಯಿಸಿದೆ.

ಇದೀಗ ಖಾಸಗಿ ಚಾನೆಲ್ ಈ ತಪ್ಪಿಗೆ ಜನರಲ್ಲಿ ಕ್ಷಮೆಯಾಚಿಸಿದೆ ಮತ್ತು ಹೇಳಿಕೆ ನೀಡಿದೆ.  ‘ಬುಧವಾರದ ಕೆಬಿಸಿ ಕಾರ್ಯಕ್ರಮದ ಸಂಚಿಕೆಯಲ್ಲಿ, ಛತ್ರಪತಿ ಶಿವಾಜಿ ಮಹಾರಾಜ್ ಅವರ ಹೆಸರನ್ನು ಕಣ್ತಪ್ಪಿನಿಂದ ತಪ್ಪಾದ ರೀತಿಯಲ್ಲಿ ಬರೆಯಲಾಗಿತ್ತು.  ಇದಕ್ಕಾಗಿ ನಾವು ವಿಷಾದಿಸುತ್ತೇವೆ. ವೀಕ್ಷಕರ ಭಾವನೆಗಳನ್ನು ಗಮನದಲ್ಲಿಟ್ಟುಕೊಂಡು ಕಳೆದ ಕಂತಿನಲ್ಲಿ ನಾವು ಸ್ಕ್ರೋಲ್ ಮೂಲಕ ವಿಷಾದ ವ್ಯಕ್ತಪಡಿಸಿದ್ದೇವೆ ಎಂದಿದ್ದಾರೆ. (ಎಸ್.ಎಚ್)

Leave a Reply

comments

Related Articles

error: