ಮನರಂಜನೆ

`ದರ್ಬಾರ್’ ಸಿನಿಮಾದ ಮೋಷನ್ ಪೋಸ್ಟರ್ ರಿಲೀಸ್

ಚೆನ್ನೈ,.8-ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ದರ್ಬಾರ್’ ಚಿತ್ರದಲ್ಲಿನ ರಜನಿಕಾಂತ್ ಲುಕ್ ಮತ್ತು ಮೋಷನ್ ಪೋಸ್ಟರ್ ರಿಲೀಸ್ ಆಗಿದೆ.

ಚಿತ್ರದ ತಮಿಳು ಆವೃತ್ತಿ ಮೋಷನ್ ಪೋಸ್ಟರ್ ಅನ್ನು ನಟ ಕಮಲ್ ಹಾಸನ್, ತೆಲುಗಿನಲ್ಲಿ ನಟ ಮಹೇಶ್ ಬಾಬು, ಮಲಯಾಲಂನಲ್ಲಿ ನಟ ಮೋಹನ್ ಲಾಲ್ ಹಾಗೂ ಹಿಂದಿಯಲ್ಲಿ ನಟ ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದಾರೆ.

ಮೋಷನ್ ಪೋಸ್ಟರ್ನಲ್ಲಿ ರಜನಿಕಾಂತ್ ಲುಕ್ ತೊಂಬತ್ತರ ದಶಕವನ್ನು ನೆನಪಿಸುತ್ತದೆ. ಖಾಕಿ ತೊಟ್ಟು ಕೈಯಲ್ಲಿ ಕತ್ತಿ ಹಿಡಿದು ಕಾಣಿಸಿಕೊಂಡಿದ್ದಾರೆ ರಜನಿಕಾಂತ್. ಮೋಷನ್ ಪೋಸ್ಟರ್ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋಷನ್ ಪೋಸ್ಟರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ತಮಿಳು ಆವೃತ್ತಿಗೆ 4.55 ಲಕ್ಷಕ್ಕೂ ಅಧಿಕ ಕ್ಲಿಕ್ಸ್ ಬಂದಿದ್ದು, ಎರಡನೇ ಸ್ಥಾನದಲ್ಲಿ ತೆಲುಗು ಆವೃತ್ತಿ ನಂತರದ ಸ್ಥಾನದಲ್ಲಿ ಹಿಂದಿ ಮತ್ತು ಮಲಯಾಲಂ ಆವೃತ್ತಿಗಳಿವೆ.

ಮಹೇಶ್ ಬಾಬು, ರಜನಿಕಾಂತ್ ಸಾರ್ ದರ್ಬಾರ್ ಮೋಷನ್ ಪೋಸ್ಟರನ್ನು ಅಭಿಮಾನಿಗಳ ಜತೆಗೆ ಹಂಚಿಕೊಳ್ಳುತ್ತಿರುವುದು ತುಂಬಾ ಖುಷಿಯ ಸಂಗತಿ. ನಿಮ್ಮ ಬಗ್ಗೆ ಎಂದೆಂದಿಗೂ ಪ್ರೀತಿ, ಗೌರವ ಹಾಗೆಯೇ ಇರುತ್ತದೆ. .ಆರ್.ಮುರುಗದಾಸ್ ಸಾರ್ ಮತ್ತು ಚಿತ್ರತಂಡಕ್ಕೆ ಅಭಿನಂದನೆಗಳು ಎಂದಿದ್ದಾರೆ.

ದರ್ಬಾರ್ನಲ್ಲಿ ಆದಿತ್ಯ ಅರುಣಾಚಲಂ ಎಂಬ ಪೊಲೀಸ್ ಅಧಿಕಾರಿಯಾಗಿ ರಜನಿಕಾಂತ್ ಕಾಣಿಸುತ್ತಿದ್ದಾರೆ. ರಜನಿಕಾಂತ್ಗೆ ಜೋಡಿಯಾಗಿ ನಯನತಾರಾ ಇದ್ದಾರೆ. ನಿವೇದಾ ಥಾಮಸ್, ಸುನೀಲ್ ಶೆಟ್ಟಿ, ಯೋಗಿ ಬಾಬು, ಸಿಮ್ರನ್ ಇನ್ನಿತರರು ಪಾತ್ರವರ್ಗ ಇದೆ. ಅನಿರುದ್ಧ್ ರವಿಚಂದ್ರನ್ ಸಂಗೀತ ಚಿತ್ರಕ್ಕಿದೆ. ಲೈಕಾ ಪ್ರೊಡಕ್ಷನ್ ಲಾಂಛನದಲ್ಲಿ ಶುಭಾಷ್ ಕರಣ್ ನಿರ್ಮಿಸುತ್ತಿರುವ ಸಿನಿಮಾ ಇದು.

ಚಿತ್ರದ ಶೂಟಿಂಗ್ ಭರದಿಂದ ಸಾಗಿದ್ದು ಮುಂದಿನ ವರ್ಷ ಸಂಕ್ರಾಂತಿಗೆ ಪ್ರೇಕ್ಷಕರ ಮುಂದೆ ಬರಲು ಸಿನಿಮಾ ಸಜ್ಜಾಗಿದೆ. ಸಿನಿಮಾ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ತೆರೆಗೆ ಬರುತ್ತಿದೆ. (ಎಂ.ಎನ್)

 

Leave a Reply

comments

Related Articles

error: