ಮೈಸೂರು

‘ಯುವ ಮನಸ್ಸಿನ ನಡೆ-ಬುದ್ಧನೆಡೆಗೆ’ ರಾಜ್ಯ ಸಮ್ಮೇಳನ ನಾಳೆ

ಮೈಸೂರು.ನ.8 : ಮೈವಿವಿಯ ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನ ಹಾಗೂ ವಿಸ್ತರಣ ಕೇಂದ್ರ ಮತ್ತು ಬೈಲುಕುಪ್ಪೆ 14ನೇ ಟಿಬೆಟಿಯನ್ ಕಾಲೇಜು ಸ್ಟೂಡೆಂಟ್ಸ್ ಕಾನ್ಫರೆನ್ಸ್ ಇವರ ಸಂಯುಕ್ತಾಶ್ರಯದಲ್ಲಿ ‘ಯುವ ಮನಸ್ಸಿನ ನಡೆ.. ಬುದ್ಧನೆಡೆಗೆ’ ಎರಡು ದಿನಗಳ ರಾಜ್ಯ ಸಮ್ಮೇಳನವನ್ನು ದಿ.9 ಮತ್ತು 10ರಂದು ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ದಿ.9ರ ಬೆಳಗ್ಗೆ 10.30ಕ್ಕೆ  ಮೈವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಉದ್ಘಾಟಿಸುವರು, ಕೆಎಸ್ಓಯು ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮುಖ್ಯ ಅತಿಥಿಯಾಗಿರುವರು, ಭಂತೆ ಸೋನಮ್ ವಾಂಗ್ ಡೆನ್ ದಿಕ್ಸೂಚಿ ಮಾತನಾಡುವರು. ಮಹಾಬೋಧಿ ಸೊಸೈಟಿ ಪ್ರಧಾನ ಕಾರ್ಯದರ್ಶಿ ಆನಂದ್ ಭಂತೇಜಿ ಅಧ್ಯಕ್ಷತೆ ವಹಿಸುವರು.

ಸಮಾರೋಪ ಸಮಾರಂಭವನ್ನು ದಿ.10ರ ಸಂಜೆ 4 ಗಂಟೆಗೆ ಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ.ಶಿವಪ್ರಸಾದ್, ಶ್ರೀಲಂಕಾದ ಡಾ.ಭಂತೆ ದಾಮೆಂದ ಪೊರಾಗೆ, ಸಂಯೋಜಕರು ಪ್ರೊ.ಸುರೇಶ್, ಕುಲಪತಿ ಪ್ರೊ.ಆರ್.ಶಿವಪ್ಪ ಅಧ್ಯಕ್ಷತೆ ವಹಿಸುವರು. (ಕೆ.ಎಂ.ಆರ್)

Leave a Reply

comments

Related Articles

error: