ಮೈಸೂರು

ಸಾಧಕರಿಗೆ ಸನ್ಮಾನ, ಉಚಿತ ಆರೋಗ್ಯ ತಪಾಸಣಾ ಶಿಬಿರ

ಮೈಸೂರು,ನ.8-ಶ್ರೀ ಮಲೆಮಹದೇಶ್ವರಸ್ವಾಮಿ ದೇವಸ್ಥಾನ ಟ್ರಸ್ಟ್ ವತಿಯಿಂದ ಲಷ್ಕರ್ ಮೊಹಲ್ಲಾದ ಶ್ರೀ ಮಲೆಮಹದೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಇಂದು 42ನೇ ವರ್ಷದ ಕಾರ್ತಿಕ ಮಾಸ, ಮಹದೇಶ್ವರಸ್ವಾಮಿ ಪೂಜಾ ಮಹೋತ್ಸವ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.

ಉಚಿತ ಆರೋಗ್ಯ ತಪಾಸಣಾ ಶಿಬಿರಕ್ಕೆ ಚಾಲನೆ ನೀಡಿದ ಶಾಸಕ ಡಾ.ಯತ್ರೀಂದ್ರ ಸಿದ್ದರಾಮಯ್ಯ ಕೆಲವರನ್ನು ತಾವೇ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ  ಮಾಜಿ ಸಂಸದ ಆರ್.ಧ್ರುವನಾರಾಯಣ್ ಉಪಸ್ಥಿತರಿದ್ದರು.

ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಒಂಭತ್ತು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ಜಯದೇವ ಆಸ್ಪತ್ರೆಯ ಮೆಡಿಕಲ್ ಸೂಪರಿಟೆಂಡೆಂಟ್ ಕೆ.ಎನ್.ಸದಾನಂದ, ಅಪೋಲೋ ಬಿಜಿಎಸ್ ಆಸ್ಪತ್ರೆಯ ಉಪಾಧ್ಯಕ್ಷರು ಹಾಗೂ ವಿಭಾಗದ ಮುಖ್ಯಸ್ಥರಾದ ಡಾ.ಭರತೇಶ್ ರೆಡ್ಡಿ, ಹೃದಯ ತಜ್ಞ ಡಾ.ಪಿ.ಜಯಕುಮಾರ್, ಎಸ್.ಆರ್.ಎಲ್ ಡಯಾಗ್ನೋಸ್ಟಿಕ್ ಸೆಂಟರ್ ನ ಡಾ.ಮದನ್ ಲಾಲ್, ಚಾಮರಾಜನಗರದ ಅರವಳಿಕೆ ತಜ್ಞ ಡಾ.ಎಂ.ಮಹೇಶ್, ಪ್ರಸೂತಿ ಹಾಗೂ ಸ್ತ್ರೀ ರೋಗ ತಜ್ಞರಾದ ಡಾ.ಪಿ.ಭಾರತಿ, ರಂಗಕಲಾವಿದ ಎಸ್.ನಂಜಪ್ಪ (ಜಾವಾ), ಕುಸ್ತಿ ಪಟು ಹಾಗೂ 2019ರ ದಸರಾ ಕುಮಾರ ಪ್ರಶಸ್ತಿ ವಿಜೇತ ಪೈಲ್ವಾನ್ ಪ್ರವೀಣ್, ಸಂಗೀತ ಕ್ಷೇತ್ರದಲ್ಲಿ ಪಾರ್ವತಮ್ಮ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ಕಾಂಗ್ರೆಸ್ ಮುಖಂಡ ಕೆ.ಹರೀಶ್ ಗೌಡ, ಮಾಜಿ ಮಹಾಪೌರ ಅನಂತು, ಹಿರಿಯ ಸಹಕಾರಿ ಧುರೀಣ ಎಸ್.ಕೃಷ್ಣಪ್ಪ, ಎಂ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: