ಮೈಸೂರು

ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ : ದೂರು

ಮೈಸೂರು, ನ.9:- ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ತರುವಂತೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪ್ರತ್ಯೇಕ ಪ್ರಕರಣಕ್ಕೆ ಸಮಬಂಧಿಸಿದಂತೆ ಮಹಿಳೆಯರಿಬ್ಬರು ಮಹಿಳಾ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸ್ವಾತಿ ಎನ್.ಎ ಎಂಬವರೇ ದೂರು ನೀಡಿದವರಾಗಿದ್ದು, ಇವರು  ವಿಶಾಲ್ ಎಸ್ ಅವರನ್ನು  26.01.2012 ರಂದು ಮದುವೆಯಾಗಿದ್ದು, ಮದುವೆಯಾದ ನಂತರ ವಿಶಾಲ್ ನೊಂದಿಗಿದ್ದು, ಆ ಸಮಯದಲ್ಲಿ   ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆಯಾಗಿ 30,000  ರೂಪಾಯಿ ಹಣವನ್ನು ತರುವಂತೆ ಬೈದು ಹೊಡೆದು ಮಾನಸಿಕ ಹಾಗೂ  ದೈಹಿಕ ಕಿರುಕುಳ ನೀಡುತ್ತಿದ್ದಾರೆ, ತದನಂತರದಲ್ಲಿ ನಮಗೆ ಹೆಣ್ಣು ಮಗವಾಗಿದ್ದು, ಆ ಸಮಯದಲ್ಲಿ  ಗಂಡು ಮಗುವಾಗಿಲ್ಲವೆಂದು  ಬೈದು ಮಾನಸಿಕ ಕಿರುಕುಳ ನೀಡುತ್ತಿದ್ದುದಲ್ಲದೇ,    ಬೇರೆ ದೇಶದ ಯುವತಿಯೊಂದಿಗೆ ಅನೈತಿಕ ಸಂಬಂಧ ಹೊಂದಿ, ತನ್ನ ಒಡವೆಗಳೆಲ್ಲವನ್ನು ಮಾರಿಕೊಂಡು, ತವರು ಮನೆಯಿಂದ ಹೆಚ್ಚಿನ ವರದಕ್ಷಿಣೆ ಹಣವನ್ನು ತರುವಂತೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿ, ಕೊಲೆ ಮಾಡುವುದಾಗಿ ಬೆದರಿಕೆ ಹಾಕಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ಸೌಮ್ಯಶ್ರೀ ಎಂಬವರೇ ದೂರು ನೀಡಿದವರಾಗಿದ್ದಾರೆ.  ದೀಪಕ್ ಮಾಲಗತ್ತಿ ಅವರನ್ನು  18.2.2018 ರಂದು ಹಿಂದೂ ಸಂಪ್ರಾದಾಯದಂತೆ ಮದುವೆಯಾಗಿದ್ದು, ಮದುವೆಯ ಸಮಯದಲ್ಲಿ ದೀಪಕ್ ಮಾಲಗತ್ತಿ, ಇಂದಿರಾ ಮಾಲಗತ್ತಿ,   ಶಿವನಂದಾ ಮಾಲಗತ್ತಿ,   ಜ್ಯೋತಿ ಕಟ್ಟಿಮನಿ ಅವರುಗಳ ಬೇಡಿಕೆಯಂತೆ 15 ಲಕ್ಷ ಹಣವನ್ನು ವರದಕ್ಷಿಣೆಯಾಗಿ ಕೊಟ್ಟಿದ್ದು,  ಮದುವೆಯಾದ ನಂತರ ಇವರೊಂದಿಗೆ  ಪುಣೆಯಲ್ಲಿ ವಾಸವಾಗಿದ್ದೆ. ಆ ಸಮಯದಲ್ಲಿ ಇವರೆಲ್ಲ ಮಾನಸಿಕ, ದೈಹಿಕ ಕಿರುಕುಳ ನೀಡಿದ್ದಲ್ಲದೇ, ಹೆಚ್ಚಿನ ವರದಕ್ಷಿಣೆಯಾಗಿ 17 ಲಕ್ಷ ಹಣವನ್ನು ತವರು ಮನೆಯಿಂದ ತರುವಂತೆ ಹಿಂಸೆ ನೀಡಿರುತ್ತಾರೆ. 17 ಲಕ್ಷ ಹಣವನ್ನು  ತನ್ನ ತಂದೆ  ಕೊಟ್ಟ ನಂತರವೂ ಸಹ ಸರಿಯಾಗಿ ನೋಡಿಕೊಳ್ಳದೇ, ಇನ್ನೂ 5 ಲಕ್ಷ ಹಣವನ್ನು ತರುವಂತೆ ಕಿರುಕುಳ ನೀಡಿ   ಒಡವೆಗಳನ್ನು ಗಿರಿವಿ ಇಟ್ಟಿದ್ದಲ್ಲದೇ,   ಡೆಬಿಟ್ ಕಾರ್ಡನ್ನು ಕಿತ್ತುಕೊಂಡು ಬೈದು ಹೊಡೆದಿರುತ್ತಾರೆ. ನಂತರದಲ್ಲಿ ನಾನು ಮತ್ತು ನನ್ನ ಪತಿ ಬೇರೆ ಮನೆ ಮಾಡಿಕೊಂಡು ವಾಸವಾಗಿದ್ದು, ಅಲ್ಲಿಯೂ ಸಹ ಸರಿಯಾಗಿ ನೋಡಿಕೊಳ್ಳದೇ, ಬೈದು, ಹೊಡೆದು ಮಾಡಿದ್ದು, ಮನೆಗೆ ಸರಿಯಾಗಿ ಬರದೇ,  ತಡರಾತ್ರಿಯವರೆಗೆ ಬೇರೆ ಹುಡುಗಿಯೊಂದಿಗೆ ಪೋನಿನಲ್ಲಿ ಮಾತನಾಡುತ್ತಿದ್ದು,   ಇದರ ಬಗ್ಗೆ ಕೇಳಿದರೆ ಬೈದು ಹೊಡೆದು, ಮಾನಸಿಕ ದೈಹಿಕ ಹಿಂಸೆ ನೀಡುತ್ತಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: