ಲೈಫ್ & ಸ್ಟೈಲ್

ದೇಹದ ಯಾವುದೇ ಭಾಗದಿಂದ ದುರ್ಗಂಧ ಬಂದರೂ ನಿರ್ಲಕ್ಷ್ಯ ಬೇಡ

ಬಿಸಿಲಿನ ತಾಪ ಏರುತ್ತಿದ್ದು ಈ ಸಂದರ್ಭ ದೇಹದಿಂದ ಬೆವರು ಹರಿಯುವುದು ಸಹಜ. ಬೆವರಿನಿಂದ ಒಮ್ಮೊಮ್ಮೆ ವಾಸನೆಯೂ ಬರುವುದುಂಟು. ಆದರೆ ಬೆವರಿನ ವಾಸನೆಯಲ್ಲದೇ ದೇಹದ ಬೇರೆ ಯಾವುದೇ ಅಂಗಗಳಿಂದ ವಾಸನೆಗಳು ಬರುತ್ತಿದ್ದರೆ ಅದು ಆರೋಗ್ಯದ ಸಮಸ್ಯೆಯೂ ಆಗಿರಬಹುದು. ಆದ್ದರಿಂದ ನಿರ್ಲಕ್ಷ್ಯ ವಹಿಸದೇ ತಕ್ಷಣ ವೈದ್ಯರನ್ನು ಸಂಪರ್ಕಿಸುವ ಅಗತ್ಯವಿದೆ.

ಬಾಯಿ: ಬಾಯಿಯಿಂದ ದುರ್ಗಂಧ ಬರುತ್ತಿದ್ದರೆ ಹೊಟ್ಟೆ ಕೆಟ್ಟಿದೆ ಅಂತಲೇ ಅರ್ಥ. ಅದು ಪದೇ ಪದೇ ಪುನರಾವರ್ತಿತವಾಗುತ್ತಿದ್ದರೆ ಮಧುಮೇಹ ಅಥವಾ ಲಿವರ್ ಸಮಸ್ಯೆಯಿಂದಲೂ ಹಾಗಾಗಿರುವ ಸಾಧ್ಯತೆಗಳಿವೆ. ಕೂಡಲೇ ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದು.

ಮೂತ್ರ : ಮೂತ್ರ ಕೆಟ್ಟ ವಾಸನೆಯಿಂದ ಕೂಡಿರುವುದು ಸಹ ಅನಾರೋಗ್ಯದ ಸಂಕೇತವೇ ಆಗಿದೆ. ಮೂತ್ರಾಶಯದಲ್ಲಿ ಬ್ಯಾಕ್ಟಿರಿಯಾಗಳು ಶೇಖರಗೊಂಡು ಮೂತ್ರಕೋಶಕ್ಕೆ ಹಾನಿಯುಂಟು ಮಾಡಬಹುದು.

ತಲೆ  : ತಲೆಯಲ್ಲಿ ಇನ್ ಫೆಕ್ಷನ್ ನ ಕಾರಣದಿಂದ ವಾಸನೆ ಬರಲಾರಂಭಿಸುತ್ತದೆ.ಇದರಿಂದ ಕೂದಲು ಸಿಕ್ಕುಸಿಕ್ಕಾಗುವುದು, ತಲೆಹೊಟ್ಟಿನ ಸಮಸ್ಯೆ ತಲೆದೋರಲಿದೆ.

ಪಾದ : ಫಂಗಲ್ ಇನ್ ಫೆಕ್ಷನ್ ನಿಂದ ಪಾದಗಳಲ್ಲಿ ವಾಸನೆ ಬರಲಾರಂಭಿಸುತ್ತದೆ. ಈ ರೀತಿ ಸಮಸ್ಯೆ ಹೆಚ್ಚಾದಲ್ಲಿ ಪಾದಕ್ಕೆ ಹಾನಿಯುಂಟಾಗಬಹುದು.

ಕಿವಿ : ಕಿವಿಯಲ್ಲಿಯೂ ಇನ್ ಫೆಕ್ಷನ್ ಉಂಟಾದಲ್ಲಿ ವಾಸನೆ ಬರಲಾರಂಭಿಸುತ್ತದೆ. ತೀವ್ರಗೊಂಡಲ್ಲಿ ಕಿವಿಯ ಪಟಲಕ್ಕೆ ಹಾನಿಯುಂಟಾಗಲಿದೆ.

ಯಾವುದನ್ನೂ ನಿರ್ಲಕ್ಷ್ಯಿಸದೇ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಿರಿ.

Leave a Reply

comments

Related Articles

error: