
ಮೈಸೂರು
ಮೈಸೂರು ಮ್ಯಾಸ್ಟರಿ ಅವಾರ್ಡ್ಸ್ ಪ್ರದಾನ
ಮೈಸೂರು,ನ.9:- ಸೆಂಟ್ ಮದರ್ ಥೆರೆಸಾ ಯೂನಿವರ್ಸಿಟಿ ವತಿಯಿಂದ ಮೈಸೂರು ಮ್ಯಾಸ್ಟರಿ ಅವಾರ್ಡ್ಸ್ ಪ್ರದಾನ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು.
ಕರ್ನಾಟಕ ಮುಕ್ತ ವಿಶ್ವವಿದ್ಯಾನಿಲಯದಲ್ಲಿರುವ ಕಾವೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾಮಾಜಿಕ ಸೇವೆಗಳು, ಶಿಕ್ಷಣ,ಕಲೆ, ಶ್ರೇಷ್ಠತೆ ಮತ್ತು ವ್ಯಾಪಾರ ಉದ್ಯಮಶೀಲತೆಯ ಅನುಕರಣೀಯ ಕೊಡುಗೆದಾರರನ್ನು ಪ್ರೋತ್ಸಾಹಿಸಲು ಹತ್ತು ಜನರಿಗೆ ಮೈಸೂರು ಮಾಸ್ಟರಿ ಅವಾರ್ಡ್ಸ್ ನೀಡಿ ಗೌರವಿಸಲಾಯಿತು.
ಹತ್ತು ಜನರಲ್ಲಿ ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ. ಮಹೇಂದ್ರ ಸಿಂಗ್ ರಾಜ್ ಪುರೋಹಿತ್ ಕಾಳಪ್ಪ , ಕಲಾ ಸೇವೆಯನ್ನು ಗುರುತಿಸಿ ಪಂಕಜ ರವಿಶಂಕರ್, ಮತ್ತು ಸಂಗೀತದ ಸಾಧನೆಯಲ್ಲಿ ಅನುಸೂಯ ಸುದರ್ಶನ್ ಅವರಿಗೆ ಮೈಸೂರು ಮಾಸ್ಟರಿ ಅವಾರ್ಡ್ಸ್ ನೀಡಿ ಗೌರವಿಸಲಾಯಿತು.(ಕೆ.ಎಸ್,ಎಸ್.ಎಚ್)