ಮೈಸೂರು

ಉರುಳಿಬಿದ್ದ ಕಾರು : ಗರ್ಭಿಣಿ ಮಹಿಳೆ ಸಾವು

ಹುಂಡೈ ವರ್ಣ ಕಾರೊಂದು ಉರುಳಿ ಬಿದ್ದ ಪರಿಣಾಮ ಗರ್ಭಿಣಿ ಮಹಿಳೆಯೋರ್ವರು ಪತಿಯ ಎದುರೇ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೃತರನ್ನು ರಾಘವೇಂದ್ರ ನಗರದ ಗಿರಿರಾಜ ಬಡಾವಣೆಯ ನಿವಾಸಿ ಮಧುಸೂದನ್ ಅವರ ಪತ್ನಿ ರೂಪಾ(32)ಎಂದು ಗುರುತಿಸಲಾಗಿದೆ. ರೂಪಾ ತನ್ನ ಸಹೋದರಿಯ ನಿವೇಶನ ನೋಡಲೆಂದು ಕಾರಿನಲ್ಲಿ ತೆರಳಿದ್ದರು. ವಾಪಸ್ ಬರುವಾಗ ಮಾನಸಿ ನಗರದ ಬಳಿ ರಿಂಗ್ ರಸ್ತೆಯ ಬಳಿ ಸಣ್ಣ ಗುಂಡಿಯೊಂದಿತ್ತು. ಅದನ್ನು ತಪ್ಪಿಸಲು  ಮಧುಸೂದನ್ ಕಾರನ್ನು ಎಡಭಾಗಕ್ಕೆ ತೆಗೆದುಕೊಂಡರು. ನಿಯಂತ್ರಣ ತಪ್ಪಿದ ಕಾರು ಉರುಳಿ ಬಿದ್ದಿದೆ. ಕಾರಿನ ಮುಂಭಾಗ  ಎಡಗಡೆ ಕುಳಿತಿದ್ದ ರೂಪಾ ಆಘಾತದಿಂದ ಅಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಅವರ ಪತಿ ಅಪಾಯದಿಂದ ಪಾರಾಗಿದ್ದಾರೆ.

ಸಿದ್ದಾರ್ಥ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: