ಮೈಸೂರು

ಸರ್ವೋಚ್ಛ ನ್ಯಾಯಾಲಯದ ತೀರ್ಪು ಸರ್ವ ಸಮ್ಮತವಾಗಿದೆ : ಸುಪ್ರೀಂ ತೀರ್ಪನ್ನು ಸ್ವಾಗತಿಸಿದ ಸಂಸದ ವಿ.ಶ್ರೀನಿವಾಸ ಪ್ರಸಾದ್

ಮೈಸೂರು,ನ.9:- ಹಿಂದೆ ಏನಾಯ್ತು ಅನ್ನುವುದರ ವಿಶ್ಲೇಷಣೆ ಬೇಡ. ಸರ್ವೋಚ್ಛ ನ್ಯಾಯಾಲಯದ ತೀರ್ಪು ಸರ್ವ ಸಮ್ಮತವಾಗಿದೆ ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್  ಸುಪ್ರೀಂ ತೀರ್ಪನ್ನು ಸ್ವಾಗತಿಸಿದ್ದಾರೆ.
ಮೈಸೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಭೂಮಿ ಸಂಬಂಧ ಹಲವಾರು ವರ್ಷಗಳಿಂದಲೂ ವಿವಾದ‌ ಇತ್ತು. ಹಲವಾರು ಸಾವು, ನೋವುಗಳಿಗೂ ಕಾರಣವಾಗಿತ್ತು. ಈಗ ಒಳ್ಳೆಯ ತೀರ್ಪು ಬಂದಿದೆ. ಹಿಂದೆ ಏನಾಯ್ತು ಎನ್ನುವುದರ ವಿಶ್ಲೇಷಣೆ ಅಪ್ರಸ್ತುತ. ಸುಪ್ರೀಂಕೋರ್ಟ್ ತೀರ್ಪು ಅಂತಿಮ ತೀರ್ಪು ನೀಡಿದೆ. ದೇಶದ ಜನತೆ ಸರ್ವಾನುಮತದಿಂದ ಐತಿಹಾಸಿಕ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಪೀಠಕ್ಕೆ ಅಭಿನಂದನೆಗಳು. ಸೌಹಾರ್ದಯುವತಾಗಿ ಸುಪ್ರೀಂ ತೀರ್ಪನ್ನು ಎಲ್ಲರೂ ಸ್ವಾಗತಿಸೋಣ ಎಂದರು.

ನಾಳೆ ಟಿಪ್ಪು ಜಯಂತಿ ಹಿನ್ನೆಲೆಯಲ್ಲಿ ಸರ್ಕಾರದ ವತಿಯಿಂದ ಟಿಪ್ಪು ಜಯಂತಿಯನ್ನು ಕೈಬಿಡಲಾಗಿದೆ. ಶಾಂತಿಯುತವಾಗಿ ಟಿಪ್ಪು ಜಯಂತಿ ಆಚರಣೆಗೆ ಮುಕ್ತವಾದ ಅವಕಾಶವಿದೆ. ಯಾವುದೇ ಗಲಭೆಗಳಿಗೆ ಅವಕಾಶ ಕೊಡದೆ ಟಿಪ್ಪು ಜಯಂತಿ ಆಚರಿಸಿ. ಸಾರ್ವಜನಿಕವಾಗಿ ಸೌಹಾರ್ದತೆಯಿಂದ ಟಿಪ್ಪು ಜಯಂತಿ ಮಾಡಿ ಎಂದು ನಾನು ಮನವಿ ಮಾಡುತ್ತೇನೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: