ಮೈಸೂರು

ಹೆಚ್.1ಎನ್.1 ಗೆ ಗರ್ಭಿಣಿ ಮಹಿಳೆ ಬಲಿ

ನಂಜನಗೂಡು ತಾಲೂಕಿನಲ್ಲಿ ನಾಲ್ವರಿಗೆ ಹೆಚ್.1ಎನ್1 ಇರುವುದು ಪತ್ತೆಯಾಗಿದ್ದು, ಈ ಜ್ವರಕ್ಕೆ ಗರ್ಭಿಣಿಯೋರ್ವರು ಬಲಿಯಾಗಿದ್ದಾರೆ.

ಮೃತರನ್ನು ತೊರೆವಲ್ಲಿ ಗ್ರಾಮದ ನಿವಾಸಿ ರೂಪದೇವಿ (33) ಎಂದು ಗುರುತಿಸಲಾಗಿದೆ. ಇವರು 5ತಿಂಗಳ ಗರ್ಭಿಣಿಯಾಗಿದ್ದರು ಎನ್ನಲಾಗಿದೆ. ನಂಜನಗೂಡಿನ ಕೆ.ಹೆಚ್.ಬಿ ಕಾಲೋನಿಯ ಶ್ರೀಕಾಂತ್, ಟಿವಿಎಸ್ ನಗರದ ಪೂರ್ಣಿಮಾ, ತಗಡೂರಿನ ಟಿ.ವಿ.ಮಾದಪ್ಪ  ಎಂಬವರಿಗೆ ಹೆಚ್.1ಎನ್.1 ಲಕ್ಷಣ ಕಾಣಿಸಿಕೊಂಡಿದ್ದು, ಮೈಸೂರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ತೀವ್ರ ಸ್ವರೂಪದ ಗಂಟಲುನೋವು, ನೆಗಡಿ, ಕೆಮ್ಮು, ವಾಂತಿ, ಅತಿಭೇದಿ, ಉಸಿರಾಟದ ತೊಂದರೆ, ಮೈಕೈ ನೋವಿರುವವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆದುಕೊಳ್ಳುವಂತೆ ವೈದ್ಯಾಧಿಕಾರಿಗಳು ತಿಳಿಸಿದ್ದಾರೆ.

Leave a Reply

comments

Related Articles

error: