ಪ್ರಮುಖ ಸುದ್ದಿ

ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ ಕೊಡಗು ಕಾಂಗ್ರೆಸ್

ರಾಜ್ಯ( ಮಡಿಕೇರಿ) ನ.9 : -ಸರ್ವಜನಾಂಗದ ಶಾಂತಿಯ ತೋಟ ಎಂದೇ ಬಿಂಬಿತವಾಗಿರುವ ಭಾರತದಲ್ಲಿ ಪ್ರತಿಯೊಬ್ಬರು ಮಾನವಧರ್ಮವನ್ನು ಅನುಸರಿಸಿಕೊಂಡು ಸಾಮರಸ್ಯಕ್ಕೆ ಪೂರಕವಾದ ವಾತಾವರಣವನ್ನು ಸೃಷ್ಟಿಸುವಂತಹ ತೀರ್ಪು ಅಯೋಧ್ಯೆ ವಿಚಾರದಲ್ಲಿ ಹೊರ ಬಿದ್ದಿದೆ ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ತೃಪ್ತಿ ವ್ಯಕ್ತಿಪಡಿಸಿದೆ.
ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ಜಿಲ್ಲಾ ವಕ್ತಾರ ಟಿ.ಈ.ಸುರೇಶ್ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವು ಐತಿಹಾಸಿಕ ತೀರ್ಪು ನೀಡುವ ಮೂಲಕ ಶತಕಗಳ ಗೊಂದಲಕ್ಕೆ ತೆರೆ ಎಳೆದಿರುವುದು ಸ್ವಾಗತಾರ್ಹವೆಂದು ಹೇಳಿದ್ದಾರೆ.
ಸೌಹಾರ್ದಯುತ, ಸಾಮರಸ್ಯ ಮತ್ತು ಜಾತ್ಯಾತೀತ ಮನೋಭಾವನೆಯ ತಳಹದಿಯಲ್ಲಿ ಸಂವಿಧಾನದತ್ತವಾದ ತೀರ್ಪು ನೀಡಲಾಗಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಎಲ್ಲಾ ಜಾತಿ, ಜನಾಂಗ, ಧರ್ಮದವರು ಒಗ್ಗೂಡಿ ದೇಶದ ಪ್ರಗತಿಯತ್ತ ಹೆಜ್ಜೆಯಿಡಬೇಕಾಗಿದೆ ಎಂದು ಹೇಳಿದ್ದಾರೆ.
ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ಹಿರಿಯರ ಮಾತಿನ ಆಧಾರದಲ್ಲಿ ಶಾಂತಿಯನ್ನು ಕಾಪಾಡುವ ಮೂಲಕ ಇತರರಿಗೆ ಮಾದರಿಯಾಗಿ ಸಹಬಾಳ್ವೆ ನಡೆಸುವ ವಾತಾವರಣವನ್ನು ಜನ ಜಾಗೃತಿಯಿಂದ ಸೃಷ್ಟಿಸಬೇಕಾಗಿದೆ ಎಂದು ಸುರೇಶ್ ಹೇಳಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: