ಮೈಸೂರು

  ಆಸ್ತಾನೆ ಕ್ವಾಜಾ  ಈದ್ ಮೀಲಾದ್ ಉನ್ ನಬಿ ಮತ್ತು ಟಿಪ್ಪು ಜಯಂತಿ ಆಚರಣೆ ಮತ್ತು ಗಣ್ಯರಿಗೆ ಸನ್ಮಾನ

ಮೈಸೂರು,ನ.11:- ಆಸ್ತಾನೆ ಕ್ವಾಜಾ ದಾರುಲ್ ಉಲೂಮ್ ಹಜರತ್ ಟಿಪ್ಪು ಸುಲ್ತಾನ್ ಫೈಜಾನ್ ಗರೀಬುನ್ ನವಾಜ್, ಗೌಸಿಯಾ ನಗರ ಇದರ ಮುಖ್ಯಸ್ಥರಾದ ಸೂಫಿ ಸಂತ ಹಜರತ್ ಕ್ವಾಜಾ ಸೋಫಿ ಅಜೀಮ್ ಅಲಿ ಚಿಸ್ಟಿ ಸಾಹೇಬ್  ಹೇಳಿಕೆ ನೀಡಿ ಪ್ರತಿ ವರ್ಷದಂತೆ ಈ ವರ್ಷವೂ ನಿನ್ನೆ ಈದ್ ಮೀಲಾದ್ ಉನ್ ನಬಿ ಮತ್ತು ಹಜರತ್ ಟಿಪ್ಪು ಸುಲ್ತಾನ್ ಅವರ 270ನೇ ಜಯಂತಿಯನ್ನು, ನಂ.203, 10ನೇ ಕ್ರಾಸ್, ಎ-ಬ್ಲಾಕ್, ಗೌಸಿಯಾ ನಗರ, ಮೈಸೂರು-570019 ಇಲ್ಲಿ ಹಜರತ್ ಕ್ವಾಜಾ ಬರ್‍ಹಾನುದ್ದೀನ್ ಖಾನ್ ಚಿಸ್ಟಿ ಅವರ ಅಧ್ಯಕ್ಷತೆಯಲ್ಲಿ ಹಾಗೂ ಹಜರತ್ ಕ್ವಾಜಾ ಸೊಫಿ ಅಜೀಮ್ ಅಲಿ ಚಿಸ್ಟಿ ಸಾಹೇಬ್‍ ಮಾರ್ಗದರ್ಶನದಲ್ಲಿ ಆಚರಿಸಲಾಯಿತು.

ಸೂಫಿ ಸಂತ ಡಾ. ಖಾಲಿದ್ ಜೀಲಾನಿ ಕೈಸರ್‍ಮೋಡ್, ಮೌಲಾನಾ ಮೊಹಮ್ಮದ್ ಯೂನುಸ್ ಖಾದ್ರಿ, ಖತೀಬ್ ಮಸೀದಿ-ಇ-ಹಜರತ್ ಗುಮ್‍ನಾಮ್ ಷಾ ವಲಿ, ಹಜರತ್ ನವೀದ್ ಷಾ ಖಾದ್ರಿ,   ಜಾಹಿದ್ ಉಲ್ಲಾ ಖಾನ್, ಟಿಪ್ಪು ಟ್ರಸ್ಟ್, ಮೈಸೂರು,   ಅತಾವುಲ್ಲಾ,   ಮೊಹಮ್ಮದ್ ನವಾಜ್ ಷರೀಫ್,   ಮೊಹಮ್ಮದ್ ಗೌಸ್,   ಬಸವಲಿಂಗ ಸ್ವಾಮೀಜಿ, ಟಿಪ್ಪು ಟೌನ್, ಮೈಸೂರು, ಮೌಲಾನಾ ಮುಜಾಹಿದ್ ಉಲ್ಲಾ ರಜ್ವಿ, ಮಿರ್ಜಾ ಜಂಷೀದ್ ಬೇಗ್ ಅಶ್ರಫಿ, ಸಫ್ದರ್ ಖೈಸರ್, ಉರ್ದು ಪತ್ರಕರ್ತ, ಮುದಸ್ಸಿರ್ ಅಹಮದ್, ಕೆ.ವಿ. ನ್ಯೂಸ್ ನೆಟ್ ಚಾನೆಲ್, ಅಸೀಮ್ ಅಹಮದ್, ಪತ್ರಿಕಾ ವರದಿಗಾರರು, 24×7 ನ್ಯೂಸ್ ನೆಟ್, ಸೈಯದ್ ಮುಸ್ತಾನ್ ಷಾ, ನವೀದ್ ಷಾ, ಹಕೀಂ ರೊಷಾ, ಜಲಾಲ್ ಹಾಫಿಜ್ ಷಾ ಖಾದ್ರಿ ಮತ್ತು ಟಿಪ್ಪುವಿನ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

ಸಿಲ್‍ಸಿಲಾಹ ಚಿಸ್ಟಿ ಅಜೀಮಾ ಇಂಡಿಯಾ ಅತಾ-ಇ-ರಸೂಲ್ ಮೂಮೆಂಟ್ ವತಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ್ಯರಿಗೆ ಸನ್ಮಾನ ಮಾಡಲಾಯಿತು. (ಎಸ್.ಎಚ್)

Leave a Reply

comments

Related Articles

error: