ಮನರಂಜನೆ

ಮನ್ನಾರ್ ಗುಡಿ ಡಾನ್ ಶಶಿಕಲಾ ಜೀವನಾಧಾರಿತ ಚಿತ್ರ ನಿರ್ಮಾಣ : ರಾಮ್‍ ಗೋಪಾಲ್ ವರ್ಮ

ಸದಾ ವಿಭಿನ್ನ ಪ್ರಯೋಗಾತ್ಮಕ ಚಿತ್ರಗಳ ಮೂಲಕ ಸುದ್ದಿಯಾಗುವ ಬಾಲಿವುಡ್ ಖ್ಯಾತ ನಿರ್ದೇಶಕ ರಾಮಗೋಪಾಲ್ ವರ್ಮ ಈ ಬಾರಿ ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಪರಮಾಪ್ತೆ ಶಶಿಕಲಾ ಅವರ ಜೀವನಾಧಾರಿತ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ.

ಸಿನಿಮಾ ಕಥೆಗೆ ಬೇಕಾಗುವ ವಸ್ತುವಿಷಯ ಸಂಗ್ರಹದಲ್ಲಿ ತೊಡಗಿರುವ ರಾಮಗೋಪಾಲ್ ವರ್ಮ ವಿಷಯ ಸಂಗ್ರಹದಲ್ಲಾಗಿರುವ ತಮ್ಮ ಅನುಭವವನ್ನು ಟ್ವಿಟರ್‍ ಮೂಲಕ  ಹಂಚಿಕೊಂಡಿದ್ದು ‘ಶಶಿಕಲಾ ಜೀವನ ಚರಿತ್ರೆ ಊಹೆಗೂ ನಿಲುಕದಷ್ಟು ಆಘಾತಕಾರಿಯಾಗಿದೆ’ ಎಂದಿದ್ದಾರೆ.

ಶಶಿಕಲಾ ಏನೆಂದು ಕೇವಲ ಮನ್ನಾರ್ ಗುಡಿ ಮಾಫಿಯಾ ಸದಸ್ಯರಿಗೆ ಮಾತ್ರ ಅರ್ಥವಾಗುವುದೆಂದು ಗಂಭೀರವಾಗಿ ತಿಳಿಸಿದ್ದು, ಮನ್ನಾರ್ ಗುಡಿ ಮಾಫಿಯಾ ಕುಟುಂಬದ ಡಾನ್ ವಿಟೋ ಕ್ಯಾರೋಲಿನ್ ಎಂದು ಉಪನಾಮ ನೀಡಿದ್ದಾರೆ. ಶಶಿಕಲಾ ವ್ಯಕ್ತಿತ್ವ ಆಧಾರಿತ ಸಿನಿಮಾದಲ್ಲಿ  ಶೇಕಡ ನೂರರಷ್ಟು ನೈಜ ಸತ್ಯಸಂಗತಿಯೇ ಒಳಗೊಂಡಿರುವುದು.  ಶಶಿಕಲಾ ಮತ್ತು ಜಯಲಲಿತಾ ನಡುವಿನ ಸಂಬಂಧ ಕಲ್ಪನೆಗೂ ನಿಲುಕದಷ್ಟು ಆಘಾತಕಾರಿಯಾಗಿದ್ದು ಸಿನಿಮಾದಲ್ಲಿ ಎಳೆಎಳೆಯಾಗಿ ಬಿಡಿಸಲಾಗುವುದು ಎಂದು ಟ್ವೀಟ್ ಮಾಡಿದ್ದಾರೆ.

ಮತ್ತೊಮ್ಮೆ ದಕ್ಷಿಣಭಾರತ ಸೇರಿದಂತೆ ಬಾಲಿವುಡ್‍ನಲ್ಲಿ ಹೊಸ ನಿರೀಕ್ಷೆಯನ್ನು ಹುಟ್ಟುಹಾಕುವರೇ ಎನ್ನುವ ಉತ್ತರಕ್ಕೆ ಇನ್ನೂ ಮುಹೂರ್ತಾ ಕೂಡಿ ಬಂದಿಲ್ಲ.

Leave a Reply

comments

Related Articles

error: