ಸುದ್ದಿ ಸಂಕ್ಷಿಪ್ತ

ಆಧಾರ ತಿದ್ದುಪಡಿ ಅರ್ಜಿ ಸಲ್ಲಿಕೆ

ಮೈಸೂರು ನ.11 : ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಿಂದುಳಿದ ವರ್ಗಗಳ ಹಾಗೂ ಅಲೆಮಾರಿ ಮತ್ತು ಅರೆಅಲೆಮಾರಿ ವಿದ್ಯಾರ್ಥಿಗಳಿಂದ ಮೆಟ್ರಿಕ ನಂತರದ ವಿದ್ಯಾರ್ಥಿವೇತನ, ಶುಲ್ಕ ವಿನಾಯಿತಿ, ವಿದ್ಯಾಸಿರಿ-ಊಟ ಮತ್ತು ವಸತಿ ಸಹಾಯ ಯೋಜನೆ ಮತ್ತು ನರ್ಸಿಂಗ ವಿದ್ಯಾರ್ಥಿಗಳಿಗೆ ಶಿಷ್ಯವೇತನ ಸೌಲಭ್ಯಕ್ಕಾಗಿ ಅನಲೈನ ಮೂಲಕ ಅರ್ಜಿ ಸಲ್ಲಿಸಿದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಆಧಾರ ಕನ್ಸಂಟ ಅರ್ಜಿಯನ್ನು ಭರ್ತಿ ಮಾಡಿ ಸಲ್ಲಿಸಲು ಸೂಚಿಸಲಾಗಿದೆ.

ಹಿಂದುಳಿದ ವರ್ಗಗಳ ಪ್ರವರ್ಗ-೧, ೨ಎ, ೩ಎ, ೩ಬಿ ವಿದ್ಯಾರ್ಥಿಗಳಿಂದ ಆಧಾರ ಕನ್ಸಂಟ ಅರ್ಜಿಯನ್ನು ಭರ್ತಿ ಮಾಡಿ ಸಂಬಂಧಿಸಿದ ಕಾಲೇಜಿಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ನಿಯೋಜಿಸಿದ ಪರಿಶೀಲನಾ ಅಧಿಕಾರಿಯವರಿಗೆ ನವೆಂಬರ ೧೩ ರೊಳಗಾಗಿ ಸಲ್ಲಿಸುವುದು. ಆನಲೈನನಲ್ಲಿ ವಿದ್ಯಾರ್ಥಿವೇತನಕ್ಕಾಗಿ ಅರ್ಜಿ ಸಲ್ಲಿಸಿ ಅಪ್ರೋಡ ಮಾಡಿದ ಬ್ಯಾಂಕ ಖಾತೆಯ ಸಂಖ್ಯೆಗೆ ಮಾತ್ರ ಆಧಾರ ಸಂಖ್ಯೆಯನ್ನು ನವೆಂಬರ ೧೦ ರೊಳಗಾಗಿ ಜೋಡಣೆ ಮಾಡಿಸಬೇಕು.

ಹೆಚ್ಚಿನ ಮಾಹಿತಿಗಾಗಿ ಮೈಸೂರು ಜಿ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿಗಳ ಕಛೇರಿಯ ದೂರವಾಣಿ ಸಂಖ್ಯೆ:೦೮೨೧-೨೩೪೨೯೧೭ ಹಾಗೂ ಆಯಾ ತಾಲ್ಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಛೇರಿಯನ್ನು ಸಂಪರ್ಕಿಸುವುದು. ಮೈಸೂರು-೦೮೨೧-೨೪೪೫೪೪೭/೯೦೩೫೦೪೨೦೦೮, ಹೆಚ.ಡಿ.ಕೋಟೆ-೦೮೨೨೮-೨೫೫೧೫೬/ ೯೪೮೧೮೧೪೨೦೯, ಹುಣಸೂರು-೦೮೨೨೨-೨೫೦೦೪೪/ ೯೫೯೧೫೯೧೪೧೯, ಕೆ.ಆರ.ನಗರ-೦೮೨೨೩-೨೬೨೨೩೦/ ೯೮೪೪೯೭೩೧೯೬, ನಂಜನಗೂಡು-೦೮೨೨೧-೨೨೪೪೩೦ /೯೭೪೧೭೮೫೪೮೩, ಪಿರಿಯಾಪಟ್ಟಣ-೦೮೨೨೩-೨೭೪೪೪೩/ ೮೭೬೨೪೭೬೭೯೦, ಟಿ. ನರಸೀಪುರ-೦೮೨೨೭-೨೬೦೦೪೦/೯೪೪೯೦೦೯೩೯೮ ನ್ನು ಸಂಪರ್ಕಿಸುವುದು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: