ಸುದ್ದಿ ಸಂಕ್ಷಿಪ್ತ

ಅಪರಿಚಿತ ವ್ಯಕ್ತಿಯ ಶವ: ವಾರಸುದಾರರು ಇದ್ದಲ್ಲಿ ಸಂಪರ್ಕಿಸಿ

ಮೈಸೂರು ನ.11 :  ಕಡಕೊಳ – ನಂಜನಗೂಡು ರೈಲ್ವೆ ನಿಲ್ದಾಣನಗಳ ನಡುವೆ .ಸುಮಾರು 25-30 ವರ್ಷದ ವ್ಯಕ್ತಿಯು ರೈಲು ಗಾಡಿ ಸಿಲುಕಿ ಮೃತಪಟ್ಟಿದ್ದು, ಮೃತದೇಹವು ಮೈಸೂರು ಮೆಡಿಕಲ ಕಾಲೇಜಿನ ಶವಗಾರದಲ್ಲಿದೆ.

ಮೃತ ಪಟ್ಟ ವ್ಯಕ್ತಿಯ ಚಹರೆಯು ದುಂಡು ಮುಖ, ಗೋಧಿ ಮೈ ಬಣ್ಣ, 5 ಅಡಿ ಎತ್ತರ, ದೃಢಕಾಯ ಶರೀರ, ತಲೆಯಲ್ಲಿ 2 ಇಂಚು ಕಪ್ಪು ಕೂದಲು, ಕುರುಚಲು ಮೀಸೆ ಇರುತ್ತದೆ. ಮೃತ ಪಟ್ಟ ವ್ಯಕ್ತಿಯು ಕಡು ನೀಲಿ ಬಣ್ಣದ ಹರಿದ ಜೀನ್ಸ ಪ್ಯಾಂಟ, ಕಪ್ಪು ನೀಲಿ ಚೌಕಳಿಯ ರೆಡಿಮೇಡ ಶರ್ಟ, ಧರಿಸಿರುತ್ತಾನೆ.

ಈ ಸಂಬಂಧ ಮೃತನ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಮೈಸೂರು ರೈಲ್ವೆ ಪೊಲೀಸ ಠಾಣೆ, ದೂರವಾಣಿ ಸಂಖ್ಯೆ: . 0821- 2516579  ಗೆ ಸಂಪರ್ಕಿಸಬೇಕಾಗಿ ಮೈಸೂರು ರೈಲ್ವೆ ಪೊಲೀಸ ಠಾಣೆಯ ಆರಕ್ಷಕ ಉಪನಿರೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: