ಪ್ರಮುಖ ಸುದ್ದಿಮೈಸೂರು

ದಿ.14ರಿಂದ ಮಕ್ಕಳ ಸಹಾಯವಾಣಿಯಿಂದ ‘ಸಪ್ತಾಹ’

ಮೈಸೂರು. ನ.12: ಪ್ರಸಕ್ತ ಸಾಲಿನಲ್ಲಿ ಸುಮಾರು 1207 ಕರೆಗಳಿಗೆ ಮಕ್ಕಳ ಸಹಾಯವಾಣಿ 1098 ಸ್ಪಂದಿಸಿದ್ದು. ಮಕ್ಕಳ ಬಗ್ಗೆ ಜಿಲ್ಲೆಯಲ್ಲಿ ಇನ್ನಷ್ಟು ಜಾಗೃತಿ ಅವಶ್ಯವಿದೆ ಎಂದು ಆರ್ ಎಲ್.ಹೆಚ್.ಪಿ ನಿರ್ದೇಶಕಿ ಸರಸ್ವತಿ ಅಭಿಪ್ರಾಯ ವ್ಯಕ್ತಪಡಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ವಿಷಯ ಪ್ರಸ್ತಾಪಿಸಿ 64 ಮಕ್ಕಳಿಗೆ ಪುನರ್ವಸತಿ, 32 ಮಕ್ಕಳಿಗೆ ಆಪ್ತ ಸಮಾಲೋಚನೆ ವೈದ್ಯಕೀಯ ಸಹಾಯ, 48 ಕಾಣೆಯಾದ ಮಕ್ಕಳ ದೂರು ದಾಖಲಿಸಿದ್ದು.120 ವಿವಿಧ ಸ್ಥಳಗಳಲ್ಲಿ ಮಕ್ಕಳು ಸಿಕ್ಕಿರುವುದು, 181 ಬಾಲ್ಯ ವಿವಾಹ ತಡೆಗಟ್ಟಿದೆ, 90 ಬಾಲಕಾರ್ಮಿಕರ ರಕ್ಷಣೆ, 78 ದೈಹಿಕ ದೌರ್ಜನ್ಯ ತಡೆಗಟ್ಟಲಾಗಿದೆ. ಇದರೊಂದಿಗೆ 14 ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸ್ಪಂದಿಸಿದೆ ಎಂದು ತಿಳಿಸಿದರು.
ಅಲ್ಲದೇ ಮಕ್ಕಳ ಹಕ್ಕು ಕಾಯ್ದೆ ಬಗ್ಗೆ ಇನ್ನಷ್ಟು ಜಾಗೃತಿ ಅವಶ್ಯವಾಗಿದ್ದು ಪ್ರತಿಯೊಬ್ಬರು ಕೈಜೋಡಿಸಬೇಕೆಂದು ಕರೆ ನೀಡಿದರು.

ಪಾಧರ್ ಅಲೆಕ್ಸ್ ಮಾತನಾಡಿ ಈ ನಿಟ್ಟಿನಲ್ಲಿ ದಿನಾಚರಣೆ ಅಂಗವಾಗಿ ದಿ. 14 ರಿಂದ 20ರವರೆಗೆ “ಮಕ್ಕಳ ರಕ್ಷಣೆ ನಮ್ಮೆಲ್ಲರ ಹೊಣೆ ವಿಷಯವಾಗಿ ” ಮಕ್ಕಳ ಸಹಾಯವಾಣಿ ಮೈತ್ರಿ ಸಪ್ತಾಹ” ಅನ್ನು ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆ, ಓಡಿಪಿ, ನಿಸರ್ಗ ಫೌಂಡೇಶನ್ ಸಹಯೋಗದಲ್ಲಿ  ಜಿಲ್ಲೆಯ ಹಲವೆಡೆ ಹಮ್ಮಿಕೊಳ್ಳಲಾಗಿದೆ ಎಂದರು.

ದಿ. 14ರಂದು ಬೆಳಗ್ಗೆ 12 ಗಂಟೆಗೆ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ, ದಿ.15 ತಲಕಾಡಿನಲ್ಲಿ, ದಿ.16 ಹೆಚ್.ಡಿ.ಕೋಟೆ, 17 ಮೈಸೂರು, 18 ಹೆಚ್.ಡಿ.ಕೋಟೆಯ ಸವ್ವೆ ಗ್ರಾಮ, 20ರಂದು ಮೈಸೂರಿನ ನಿರೀಕ್ಷ ಶಾಲೆ ಹಾಗೂ ದೇವಲಾಪುರ ಗ್ರಾಮ ಪಂಚಾಯ್ತಿಯಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.

ಧನರಾಜ್, ಶಶಿಕುಮಾರ್, ಚಿಕ್ಕ ತಮ್ಮಯ್ಯ ಹಾಗೂ ಇತರರು ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: