ಪ್ರಮುಖ ಸುದ್ದಿಮೈಸೂರು

ದಿ.17ರಂದು ವಿಚಾರ ಸಂಕಿರಣ – ಮುಕ್ತ ಸಂವಾದ

ಮೈಸೂರು. ನ.12: ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿ ಏಕೆ ? ಬೇಕೆ? ವಿಷಯಾಧಾರಿತ ವಾಗಿ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಮುಕ್ತ ಚರ್ಚೆಯನ್ನು ದೇಸಿರಂಗ ಸಾಂಸ್ಕೃತಿಕ ಸಂಸ್ಥೆ ಹಮ್ಮಿಕೊಳ್ಳಲಾಗಿದೆ ಎಂದು ಕಾರ್ಯದರ್ಶಿ ಕೃಷ್ಣ ಜನಮನ ತಿಳಿಸಿದರು.
ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ದಿ.17 ರಂದು ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆಯುವ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತರಾದ ಕೃಷ್ಣಪ್ರಸಾದ್ ಚಾಲನೆ ನೀಡುವರು.ಪ್ರೋ.ಎಚ್.ಗೋವಿಂದಯ್ಯ ಅಧ್ಯಕ್ಷತೆ ವಹಿಸುವರು. ಪತ್ರಕರ್ತ ಜಗದೀಶದ ಕೊಪ್ಪ “ಗಾಂಧಿ ಮತ್ತು ಅಂಬೇಡ್ಕರ್ ಚಿಂತನೆಯ ಒಳನೋಟಗಳು”, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ” ಗಾಂಧಿ ಮತ್ತು ಅಂಬೇಡ್ಕರ್ ವಿಚಾರಧಾರೆಯಲ್ಲಿರುವ ಧ್ವಂದ್ವಗಳು” ಬಗ್ಗೆ, ಪ್ರೊ.ಮಹಾದೇವ ಸಂಕನಪುರ ಅವರು ” ಗಾಂಧಿ ಮತ್ತು ಅಂಬೇಡ್ಕರ್ ಮುಖಾಮುಖಿ-ಭಾರತದ ಸಾಮಾಜಿಕ ವ್ಯವಸ್ಥೆಗೆ ಪೂರಕವೇ ಬಗ್ಗೆ ಮಾತನಾಡಲಿದ್ದಾರೆ ಎಂದು ತಿಳಿದರು.
ನಂತರ ನಡೆಯುವ ಮುಕ್ತ ಚರ್ಚೆಯಲ್ಲಿ ರಾಜ್ಯದ ಹಲವಾರು ಗಾಂಧಿವಾದಿಗಳು, ಅಂಬೇಡ್ಕರ್ ವಾದಿಗಳು,ಸಮನ್ವಯವಾದಿಗಳು ಹಾಗೂ ‌ಬಹುಜನವಾದಿಗಳು ಭಾಗಿಯಾಗಲಿದ್ದಾರೆ ಎಂದರು.
ಮಧ್ಯಾಹ್ನ 2ಗಂಟೆಗೆ ನಡೆಯುವ ಸಮಾರೋಪದಲ್ಲಿಮಾಜಿ ಸಚಿವ ಎನ್. ಮಹೇಶ್, ಹಿರಿಯ ಸಮಾಜವಾದಿ ಪ.ಮಲ್ಲೇಶ್. ರಂಗಾಯಣದ ಜಂಟಿ ನಿರ್ದೇಶಕ ಎನ್.ಮಲ್ಲಿಕಾರ್ಜುನ ಹಾಜರಿರಲಿದ್ದಾರೆ ಎಂದರು.
ಸಂಚಾಲಕಿ ಬಿ.ಎಸ್.ದಿನಮಣಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: