ಪ್ರಮುಖ ಸುದ್ದಿಮೈಸೂರು

ನ.14ರಂದು ಶಾರದಾ ವಿಲಾಸನಲ್ಲಿ ‘ಭವಿಷ್ಯದ ಕೌಶಲ್ಯ ವೇದಿಕೆ’ ಗೆ ಚಾಲನೆ

ಮೈಸೂರು,ನ.12 : ನಗರದ ಶಾರದಾ ವಿಲಾಸ ವಿದ್ಯಾಸಂಸ್ಥೆ ವತಿಯಿಂದ ಉದ್ಯೋಗಾವಕಾಶಾಧಾರಿತ ವಿವಿಧ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸುವ ಉದ್ದೇಶದ ಭವಿಷ್ಯದ ಕೌಶಲ್ಯಗಳ ವೇದಿಕೆ ಸ್ಥಾಪಿಸಿದ್ದು, ಅದರ ಉದ್ಘಾಟನೆ ನ. 14 ರಂದು ವಿದ್ಯಾಸಂಸ್ಥೆಯ ಶತಮಾನೋತ್ಸವ ಭವನದಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಬಿ.ಎಸ್. ಪಾರ್ಥಸಾರಥಿ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 10ಕ್ಕೆ ಮೈಸೂರು ವಿವಿ ಕುಲಪತಿ ಪ್ರೊ.ಜಿ. ಹೇಮಂತ್‌ಕುಮಾರ್ ಉದ್ಘಾಟಿಸುವರು, ಮಲಹರ ರಾಜು ಪಿನ್ನೆಳ್ಳಿ ಪ್ರಾಸ್ತಾವಿಕ ಭಾಷಣ ಮಾಡುವರು, ತಾವು ಅಧ್ಯಕ್ಷತೆ ವಹಿಸಲಿದ್ದು, ಎಚ್.ಕೆ. ಶ್ರೀನಾಥ್, ಹರ್ಷ ಕಿಕ್ಕೇರಿ, ಅರ್ಜು ಖನ್ನ, ಶ್ರೀದೇವಿ ಸಿರಾ, ದಿನೇಶ್‌ಕುಮಾರ್ ಪಾಣಿಗ್ರಾಹಿ ಅತಿಥಿಗಳಾಗಿರುವರು.

ಈ ವೇದಿಕೆ ಭವಿಷ್ಯ ಉದ್ಯೋಗಾಧಾರಿತ ವಿಷಯಗಳಾದ ಸೈಬರ್ ಭದ್ರತೆ, 3.-ಡಿ ಪ್ರಿಂಟಿಂಗ್, ಬ್ಲಾಕ್ ಚೈನ್, ವರ್ಚುಯಲ್ ರಿಯಾಲಿಟಿ, ಮೊಬೈಲ್ ಟೆಕ್ನಾಲಜಿ, ಬಿಗ್ ಡಾಟಾ ಅನಾಲಿಟಿಕ್ಸ್ ಮೊದಲಾದವನ್ನು ಗಮನದಲ್ಲಿರಿಸಿಕೊಂಡು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನಡೆಸಲಿದೆ.

ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾದವರು, ವಿದ್ಯಾಭ್ಯಾಸ ಮಾಡುತ್ತಿರುವವರಿಗೆ ಅನುಕೂಲಕರ ವೇಳೆಗಳಲ್ಲಿ, ಅತಿ ಕಡಿಮೆ ಶುಲ್ಕದಲ್ಲಿ ತರಬೇತಿ ನೀಡಿ ಪ್ರಮಾಣಪತ್ರ ನೀಡಲಾಗುವುದು. ಈ ರೀತಿಯ ತರಬೇತಿ ಪಡೆದವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಹೆಚ್ಚಾಗಿರಲಿದ್ದು, ಈ ರೀತಿಯ ವೇದಿಕೆ ರಾಜ್ಯದಲ್ಲಿಯೇ ಮೊದಲನೆಯದಾಗಿದೆ ಎಂದು ಮಾಹಿತಿ ನೀಡಿದರು.

ಪ್ರೊ. ಜಗದೀಶ್‌ಕೃಷ್ಣ, ರಾಜೇಂದ್ರಪ್ರಸಾದ್, ಎಚ್.ಕೆ. ಶ್ರೀನಾಥ್, ಶ್ರೀನಿವಾಸ ರಾಘವನ್, ಡಾ. ಸತ್ಯನಾರಾಯಣ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: