ಮೈಸೂರು

ಪೌರಕಾರ್ಮಿಕರಿಗೆ ಶೀಘ್ರದಲ್ಲೇ ಉಚಿತವಾಗಿ ದೊರೆಯಲಿದೆ  ಬೆಳಗಿನ ಉಪಹಾರ

ಮೈಸೂರು, ನ.13:- ಮೈಸೂರು ನಗರವನ್ನು ಸ್ವಚ್ಛವಾಗಿಡಲು ಅಹರ್ನಿಶಿ ಶ್ರಮಿಸುತ್ತಿರುವ ಪೌರಕಾರ್ಮಿಕರಿಗೆ ಶೀಘ್ರದಲ್ಲೇ ಬೆಳಗಿನ ಉಪಹಾರ ಉಚಿತವಾಗಿ ಲಭಿಸಲಿದೆ.

1,645 ಪೌರಕಾರ್ಮಿಕರು 65ವಾರ್ಡ್ ಗಳಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದು, 530 ಖಾಯಂ ಪೌರಕಾರ್ಮಿಕರಿದ್ದಾರೆ. ಒಳಚರಂಡಿ ಕಾರ್ಮಿಕರ ಸಂಖ್ಯೆ 212, ಹೆಚ್ಚಿನವರು ಬೆಳಿಗ್ಗೆ 5ಗಂಟೆಯಿಂದಲೇ ಕೆಲಸ ಆರಂಭಿಸಿ ಮಧ್ಯಾಹ್ನದವರೆಗೂ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.

ಸರ್ಕಾರ ಉಪಹಾರ ನೀಡಲು ಮೂರು ವರ್ಷದ ಹಿಂದೆಯೇ ಯೋಜನೆ ರೂಪಿಸಿತ್ತು. ವಾರ್ಡ್ ಗಳಲ್ಲಿ ಬೆಳಿಗ್ಗೆ 9ರಿಂದ 10ರವರೆಗೆ ಉಪಹಾರ ವಿತರಣೆಗೆ ನಿರ್ಧರಿಸಿತ್ತು.  ಆದರೆ ಟೆಂಡರ್ ದಾರರು ಮುಂದೆ ಬಂದಿರಲಿಲ್ಲ. ಇದೀಗ 2,300ಮಂದಿಗೆ ಉಪಹಾರ ಕಲ್ಪಿಸಲು ಮೈಸೂರು ಮಹಾನಗರ ಪಾಲಿಕೆ ವತಿಯಿಂದ ವಾರ್ಷಿಕ 1.83ಕೋಟಿ ರೂ.ಗಳಿಗೆ ಮೀಸಲಿರಿಸುತ್ತಿದ್ದು, ಕನಕದಾಸ ಜಯಂತಿಯ ಅಂಗವಾಗಿ ನವೆಂಬರ್ 15ರಂದು ನಗರದ ಎಲ್ಲಾ 65 ವಾರ್ಡ್ ಗಳಲ್ಲಿ ಪೌರಕಾರ್ಮಿಕರಿಗೆ ಉಪಹಾರ ನೀಡುವ ಮಹತ್ವಾಕಾಂಕ್ಷಿ ಯೋಜನೆಗೆ ಚಾಲನೆ ದೊರಕಲಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: