ಕರ್ನಾಟಕಪ್ರಮುಖ ಸುದ್ದಿ

17 ಸ್ಥಾನಗಳಲ್ಲಿ ಗೆಲುವು ನಮ್ಮದೇ: ಸಿಎಂ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು,ನ.13-ಎಲ್ಲಾ 17 ಸ್ಥಾನಗಳಲ್ಲಿ ಗೆಲುವು ನಮ್ಮದೇ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಅನರ್ಹ ಶಾಸಕರ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸುಪ್ರೀಂಕೋರ್ಟ್‌ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ಎಲ್ಲಾ 17 ಶಾಸಕರು ಉಪಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂಬ ತೀರ್ಪನ್ನು ನೀಡಿದೆ. ನಾಳೆಯಿಂದಲೇ ನಾವು ಆ ಎಲ್ಲಾ ಕ್ಷೇತ್ರಗಳ ಪ್ರವಾಸಕ್ಕೆ ತೆರಳುವವರಿದ್ದೇವೆ. ಹಾಗೆಯೇ ನಾವು ಎಲ್ಲಾ 17 ಸ್ಥಾನಗಳನ್ನು ಶೇ. 101ರಷ್ಟು ಗೆದ್ದೇ ತೀರುತ್ತೇವೆ ಎಂದಿದ್ದಾರೆ.

ಎಲ್ಲಾ 17 ಶಾಸಕರು ಬಿಜೆಪಿಗೆ ಸೇರುತ್ತಾರೆಯೇ ಎಂಬ ಪ್ರಶ್ನೆಗೆ ಸಂಜೆಯವರೆಗೆ ಕಾಯಿರಿ. ನಾನು ಅನರ್ಹ ಶಾಸಕರೊಡನೆ ಹಾಗೂ ರಾಷ್ಟ್ರದ ನಾಯಕರೊಡನೆ ಚರ್ಚಿಸುತ್ತೇನೆ. ಸಂಜೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದರು. (ಎಂ.ಎನ್)

Leave a Reply

comments

Related Articles

error: