ಪ್ರಮುಖ ಸುದ್ದಿಮೈಸೂರು

15ರಿಂದ ನಗರದಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ

ಮೈಸೂರು,ನ.13 : ಕೇಂದ್ರದ ಆಯುಷ್ ಮಂತ್ರಾಲಯ ವತಿಯಿಂದ ಇದೇ ಮೊದಲ ಬಾರಿಗೆ ಮೈಸೂರಿನಲ್ಲಿ ಎರಡು ದಿನಗಳ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಲಾಗಿದೆ ಎಂದು ಕೇಂದ್ರದ ಆಯುಷ್ ಇಲಾಖೆ ನಿರ್ದೇಶಕ ವಿಕ್ರಮ್ ಸಿಂಗ್ ಹೇಳಿದರು.
ನ.15, 16 ರಂದು ನಗರದ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಆವರಣದಲ್ಲಿ ಸಮ್ಮೇಳನ ನಡೆಯಲಿಯಲಿದ್ದುಘಿ, 15ಕ್ಕೂ ಹೆಚ್ಚು ದೇಶಗಳ ಹಾಗೂ ಭಾರತದ 700ಕ್ಕೂ ಹೆಚ್ಚು ಅತಿಥಿಗಳ ಭಾಗವಹಿಸಿ ವಿಷಯ ಮಂಡಲಿಸಲಿದ್ದಾರೆ. ಆಧುನಿಕ ಜೀವನ ಶೈಲಿ, ಒತ್ತಡ, ಚಟ ಮುತಾಂದವುಗಳಿಂದ ಹೃದಯ ಸಂಬಂಧ ಕಾಯಿಲೆಗೆ ತುತ್ತಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ‘ಹೃದಯದ ಆರೈಕೆಗಾಗಿ ಯೋಗ’ ಘೋಷವಾಕ್ಯದಡಿ ಅಂತಾರಾಷ್ಟ್ರೀಯ ಯೋಗ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.15 ಬೆಳಗ್ಗೆ 10ಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮ್ಮೇಳನ ಉದ್ಘಾಟಿಸಲಿದ್ದಾರೆ. ಆರೋಗ್ಯ ಸಚಿವ ಶ್ರೀರಾಮಲು, ಸಂಸದ ಪ್ರತಾಪ ಸಿಂಹ, ಪತಂಜಲಿ ಯೋಗಪೀಠ ಸಂಸ್ಥಾಪಕ ಬಾಬಾ ರಾಮ್‌ದೇವ್, ಡಾ.ಎಚ್.ಆರ್.ನಾಗೇಂದ್ರ , ಧರ್ಮಸ್ಥಳದ ಧರ್ಮಾಕಾರಿ ಡಾ.ಡಿ.ವಿರೇಂದ್ರ ಹೆಗಡೆ, ವೈದ್ಯ ರಾಜೇಶ್ ಕಟೋಚ, ಮುಕ್ತ ವಿವಿ ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.  ನ.16 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ರಾಜ್ಯಪಾಲ  ವಾಜುಬಾಯಿ ವಾಲಾ ಅವರು ಮುಖ್ಯಅತಿಥಿಯಾಗಿ ಭಾಗವಹಿಸಲಿದ್ದಾರೆ.
ಆಯುಷ್ ಇಲಾಖೆ ಆಯುಕ್ತೆ ಮೀನಾಕ್ಷಿ ದೇವಿ ಮಾತನಾಡಿ, ಅಂತಾರಾಷ್ಟ್ರೀಯ ಸಮ್ಮೇಳವನ್ನು ಕಳೆದ ನಾಲ್ಕು ವರ್ಷಗಳಿಂದ ಆಚರಿಸಿಕೊಂಡು ಬರುತ್ತಿದ್ದುಘಿ, ಇದು 5ನೇ ಸಮ್ಮೇಳನ. ದೆಹಲಿಯಲ್ಲಿ ಮಾತ್ರ ಆಯೋಜಿಸಲಾಗುತ್ತಿದ್ದು, ಸಮ್ಮೇಳನವು ಮೊದಲ ಬಾರಿ ಮೈಸೂರಿನಲ್ಲಿ ಆಯೋಜಿಸಲಾಗಿದೆ. ಮೈಸೂರು ಯೋಗ ನಗರಿ. ಯೋಗ ಪರಂಪರೆ ಉಳಿಸಿಕೊಂಡಿದೆ. ಬೇರೆ ನಗರಗಿಂತ ಇಲ್ಲಿ ಯೋಗಕ್ಕೆ ವಿಶಿಷ್ಟ ವಿದೆ ಎಂದು ತಿಳಿಸಿದರು.
ಯೋಗ ಈಗ ವಿಶ್ವವ್ಯಾಪಿಯಾಗಿದೆ. ರೋಗಗಳನ್ನು ಗುಣಪಡಿಸುತ್ತದೆ ಎನ್ನುವುದು ವೈಜ್ಞಾನಿಕ ಕಾರಣಗಳೇನು? ಎಂದು  ಹಲವರು ಪ್ರಶ್ನಿಸುತ್ತಾರೆ. ಅದಕ್ಕೆಲ್ಲ ಉತ್ತರದಾಯಿಯಾಗಿ ಸಮ್ಮೇಳನದಲ್ಲಿ ಯೋಗದ ವೈಜ್ಞಾನಿಕ ಅಂಶಗಳ ಬಗ್ಗೆ ಗೋಷ್ಠಿ ನಡೆಯಲಿದೆ ಎಂದರು.
ಇಂದು ಯೋಗಥಾನ್
ಸಮ್ಮೇಳನನದ ೂರ್ವ‘ಾವಿಯಾಗಿ ಮೈಸೂರು ಅರಮನೆ ಮುಂಭಾಗದಲ್ಲಿ ನ.14 ರಂದು ಬೆಳಗ್ಗೆ 6.30ಕ್ಕೆ ಯೋಗಥಾನ್ ಯೋಗ ನಡಿಗೆ ಕಾರ‌್ಯಕ್ರಮ ಆಯೋಜಿಸಲಾಗಿದೆ ಎಂದು ಜಿಲ್ಲಾ ಆಯುಷ್ ಅಕಾರಿ ಡಾ.ಸೀತಾಲಕ್ಷ್ಮೀ ತಿಳಿಸಿದರು.
ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ಪ್ರಾಂಶುಪಾಲ ಡಾ.ಗಜಾನನ ಹೆಗ್ಡೆ, ಹೈಟೆಕ್ ಪಂಚಕರ್ಮ ಆಯುರ್ವೇದ ಆಸ್ಪತ್ರೆ ನಿರ್ದೇಶಕ ವಿಜಯ ಮಹಾತೇಂಶ ಹೂಗಾರ ಇದ್ದರು.(ವರದಿ : ಕೆ.ಎಂ.ಆರ್)

Leave a Reply

comments

Related Articles

error: