ಪ್ರಮುಖ ಸುದ್ದಿ

ಮೊದಲಿಗಿಂತ ಉತ್ತಮವಾಗಿದೆ ಗಾಯಕಿ ಲತಾ ಮಂಗೇಶ್ಕರ್  ಆರೋಗ್ಯ ;  ಧನ್ಯವಾದ ಅರ್ಪಿಸಿದ ಕುಟುಂಬ

ದೇಶ(ನವದೆಹಲಿ)ನ.13:-   ಉಸಿರಾಟದ ತೊಂದರೆಯಿಂದಾಗಿ  ‘ಭಾರತದ ಕೋಗಿಲೆ’  ಪ್ರಖ್ಯಾತ ಗಾಯಕಿ ಲತಾ ಮಂಗೇಶ್ಕರ್ (ಲತಾ ಮಂಗೇಶ್ಕರ್) ಅವರನ್ನು ಸೋಮವಾರ ಮುಂಬೈನ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅಂದಿನಿಂದ, ದೇಶಾದ್ಯಂತ ಜನರು ಅವರ ಆರೋಗ್ಯದ ಬಗ್ಗೆ ಚಿಂತಿತರಾಗಿದ್ದರು. ಆದರೆ ಈಗ ಲತಾ ಮಂಗೇಶ್ಕರ್ ಅವರ ಸ್ಥಿತಿ ಮೊದಲಿಗಿಂತ ಈಗ ಉತ್ತಮವಾಗಿದೆ ಎಂಬ ಮಾಹಿತಿಯನ್ನು ಮಾಧ್ಯಮವೊಂದು ಹೊರ ಹಾಕಿದೆ.

ಈ ಮಾಹಿತಿಯನ್ನು ಯಾವುದೇ ಬಾಹ್ಯ ಮೂಲದಿಂದ ನೀಡಲಾಗಿಲ್ಲ ಆದರೆ ಲತಾ ಮಂಗೇಶ್ಕರ್ ಅವರ ಕುಟುಂಬವೇ ನೀಡಿದೆ ಎನ್ನಲಾಗಿದ್ದು,  ಆ ಸಂದರ್ಭದಲ್ಲಿ ಬೆಂಬಲ ನೀಡಿ, ಹಾರೈಸಿದ್ದಕ್ಕಾಗಿ ಅವರ ಕುಟುಂಬ ಸದಸ್ಯರು ಜನತೆಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.

ಲತಾ ಮಂಗೇಶ್ಕರ್ ಅವರ ಕುಟುಂಬ ಹೊರಡಿಸಿದ ಹೇಳಿಕೆಯಲ್ಲಿ, “ಲತಾ ದಿ ಅವರ ಆರೋಗ್ಯ ಸ್ಥಿರವಾಗಿದೆ ಮತ್ತು ಹೆಚ್ಚು ಉತ್ತಮವಾಗಿದೆ. ನಿಮ್ಮ ಪ್ರಾರ್ಥನೆಗೆ ತುಂಬಾ ಧನ್ಯವಾದಗಳು. ಅವರು   ಸಂಪೂರ್ಣವಾಗಿ ಚೇತರಿಸಿಕೊಳ್ಳುವುದನ್ನೇ ನಾವು ಕಾಯುತ್ತಿದ್ದೇವೆ. ಅವರು ಬೇಗ ಮನೆಗೆ ಮರಳುವಂತಾಗಲಿ.   ನಮ್ಮ ಗೌಪ್ಯತೆಯನ್ನು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದಿದ್ದಾರೆ ಎನ್ನಲಾಗಿದೆ.

ಪರಿಸ್ಥಿತಿ ಸ್ವಲ್ಪ ಸುಧಾರಿಸಿದರೆ, ಲತಾ ಮಂಗೇಶ್ಕರ್ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಬಹುದು ಎಂದು ಭಾವಿಸಲಾಗಿದೆಯಾದರೂ  ಆರೋಗ್ಯದಲ್ಲಿ ಯಾವುದೇ ಸುಧಾರಣೆಯಿಲ್ಲ ಎಂಬುದು ಹೇಳಿಕೆಯಿಂದ ಸ್ಪಷ್ಟವಾಗಿದೆ,

ಇತ್ತೀಚೆಗೆ ಲತಾ ಮಂಗೇಶ್ಕರ್ ತಮ್ಮ 90 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.    ಅವರು ಕೇಂದ್ರ ಸರ್ಕಾರದಿಂದ ನೀಡುವ ಪದ್ಮಶ್ರೀ ಸೇರಿದಂತೆ ಅನೇಕ ಗೌರವಗಳನ್ನು ಪಡೆದಿದ್ದಾರೆ. ಚಲನಚಿತ್ರ ಪ್ರಪಂಚದ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು 30 ವರ್ಷಗಳ ಹಿಂದೆಯೇ ಲತಾ ದೀದಿಗೆ ನೀಡಲಾಯಿತು. ದೇಶದ ಅತಿದೊಡ್ಡ ನಾಗರಿಕ ಗೌರವವೂ ದೊರಕಿದೆ. (ಎಸ್.ಎಚ್)

Leave a Reply

comments

Related Articles

error: