ಸುದ್ದಿ ಸಂಕ್ಷಿಪ್ತ

ಮತದಾರ ಸಾಕ್ಷರತಾ ಕ್ಲಬ್ ಸ್ಪರ್ಧೆ ನಾಳೆ

ಮೈಸೂರು.ನ.13 : ಪದವಿಪೂರ್ವ ಶಿಕ್ಷಣ ಇಲಾಖೆ, ನಟರಾಜ ಮಹಿಳಾ ಪದವಿಪೂರ್ವ ಕಾಲೇಜು ಸಂಯುಕ್ತವಾಗಿ ತಾಲ್ಲೂಕು ಮಟ್ಟದ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳ ಮತದಾರ ಸಾಕ್ಷರತಾ ಕ್ಲಬ್ ಸ್ಪರ್ಧೆಯನ್ನು ನ.14ರ ಬೆಳಗ್ಗೆ 10.30ಕ್ಕೆ ನಟರಾಜ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ನಟರಾಜ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ ಚಿದಾನಂದ ಸ್ವಾಮೀಜಿ ಸಾನಿಧ್ಯ ವಹಿಸುವರು, ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಡಾ.ಬಿ.ಎನ್.ನಾಗರತ್ನ ಉದ್ಘಾಟಿಸುವರು, ಮತದಾರ ಸಾಕ್ಷರತಾ ಕ್ಲಬ್ ಜಿಲ್ಲಾ ಸಂಯೋಜಕರಾದ ಡಾ.ಮಂಗಳಮೂರ್ತಿ, ಸಹ ಸಂಯೋಜಕರಾದ ಎಂ.ಎಂ.ಮಹದೇವು ಭಾಗಿಯಾಗುವರು, ಪ್ರಾಂಶುಪಾಲರಾದ ವಿ.ಪ್ರದೀಪ್ ಅಧ್ಯಕ್ಷತೆ. (ಕೆ.ಎಂ.ಆರ್)

Leave a Reply

comments

Related Articles

error: