ಸುದ್ದಿ ಸಂಕ್ಷಿಪ್ತ

ನ.24 : ಸಂಪಾಜೆಯಲ್ಲಿ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟ

ಮಡಿಕೇರಿ ನ.13 :- ನೆಹರು ಯುವ ಕೇಂದ್ರ ಹಾಗೂ ಚೆಡಾವು ನೇತಾಜಿ ಗೆಳೆಯರ ಬಳಗದ ವತಿಯಿಂದ ನ.24 ರಂದು ಮಡಿಕೇರಿ ತಾಲ್ಲೂಕು ಮಟ್ಟದ ಗ್ರಾಮೀಣ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ. ಸಂಪಾಜೆ ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆಯಲಿರುವ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಹಗ್ಗಜಗ್ಗಾಟ, ಗುಡ್ಡಗಾಡು ಓಟ, ಭಾರದ ಗುಂಡು ಎಸೆತ ಸೇರಿದಂತೆ ಹತ್ತಾರು ಸ್ಪರ್ಧೆಗಳು ನಡೆಯಲಿವೆ. ಮಡಿಕೇರಿ ತಾಲ್ಲೂಕಿನ ಕ್ರೀಡಾಪಟುಗಳು ಮಾತ್ರ ಪಾಲ್ಗೊಳ್ಳಬೇಕೆಂದು ಆಯೋಜಕರು ತಿಳಿಸಿದ್ದಾರೆ.

Leave a Reply

comments

Related Articles

error: