ದೇಶಪ್ರಮುಖ ಸುದ್ದಿ

ಸಬ್ಸಿಡಿ ರಹಿತ ಅಡುಗೆ ಅನಿಲ ದರ ಏರಿಕೆ : ಮಾರ್ಚ್ 1 ರಿಂದ ಜಾರಿ

ನವದೆಹಲಿ : ಸಬ್ಸಿಡಿರಹಿತ ಅಡುಗೆ ಅನಿಲ – ಎಲ್‌ಪಿಜಿ ದರವನ್ನು ಮತ್ತೆ ಏರಿಸಲಾಗಿದ್ದು, ಮಾರ್ಚ್‌ 1ರಿಂದಲೇ  ಹೊಸ ದರ ಜಾರಿಯಾಗಿದೆ ಎಂದು ಭಾರತೀಯ ತೈಲ ನಿಗಮ (ಐಒಸಿ) ಪ್ರಕಟಿಸಿದೆ.

ಹೊಸ ದರದಂತೆ ಬೆಂಗಳೂರು ಮತ್ತು ದೆಹಲಿಯಲ್ಲಿ 86 ರು, ಮುಂಬೈನಲ್ಲಿ 88, ಕೋಲ್ಕತ್ತ ಮತ್ತು ಚೆನ್ನೈನಲ್ಲಿ 85 ರು. ದುಬಾರಿ ಆಗಲಿದೆ. ಸ್ಥಳೀಯ ತೆರಿಗೆ ಕಾರಣ ವಿವಿಧ ರಾಜ್ಯಗಳಲ್ಲಿ ಅಡುಗೆ ಅನಿಲ ಬೆಲೆಯಲ್ಲಿ ವ್ಯತ್ಯಾಸ ಕಂಡು ಬರಲಿದೆ. ಕಳೆದ ತಿಂಗಳಷ್ಟೇ ಸಬ್ಸಿಡಿಯೇತರ ಎಲ್‌ಪಿಜಿ ಸಿಲಿಂಡರ್‌ ದರವನ್ನು 76 ರಷ್ಟು ಹೆಚ್ಚಿಸಲಾಗಿತ್ತು.

ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ ಫೆಬ್ರವರಿ 28 ರ ವರೆಗೂ 651.50 ರೂ ಇತ್ತು. ಮಾರ್ಚ್ 1 ರಿಂದ 737.50 ರೂ. ಆಗಲಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಏರಿಕೆಯಾಗಿದ್ದರಿಂದ ಅಡುಗೆ ಅನಿಲದ ಬೆಲಯಲ್ಲು ಏರಿಕೆಯಾಗಿದೆ.

Leave a Reply

comments

Related Articles

error: