ಮೈಸೂರು

ಮುಖ್ಯ ಅಗ್ನಿಶಾಮಕ ಅಧಿಕಾರಿಯಾಗಿ ಯೂನಸ್ ಅಲಿ ಕೌಸರ್ ಅಧಿಕಾರ ಸ್ವೀಕಾರ

ಮೈಸೂರಿನ ಸರಸ್ವತಿಪುರಂನಲ್ಲಿರುವ ಅಗ್ನಿಶಾಮಕ ಠಾಣಾ ಕಚೇರಿಯಲ್ಲಿ  ಮುಖ್ಯ ಅಗ್ನಿಶಾಮಕ ಅಧಿಕಾರಿಯಾಗಿ ಯೂನಸ್ ಅಲಿ ಕೌಸರ್ ಗುರುವಾರ ಅಧಿಕಾರ ಸ್ವೀಕರಿಸಿದರು.

ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಜಿ.ಈಶ್ವರ್ ನಾಯಕ್ ಹೂಗುಚ್ಛ ನೀಡುವ ಮೂಲಕ  ಆತ್ಮೀಯವಾಗಿ ಬರಮಾಡಿಕೊಂಡರು.

ಯೂನಸ್ ಅಲಿ ಕೌಸರ್ ಸುದ್ದಿಗಾರರೊಂದಿಗೆ ಮಾತನಾಡಿ ಇದು ತರಬೇತಿ ಕೇಂದ್ರವೂ ಆಗಿರುವುದರಿಂದ ಅಗ್ನಿಯ ಕುರಿತಂತೆ ಹೆಚ್ಚಿನ ಭದ್ರತೆಗಳ ಕುರಿತು ತಿಳಿಸಿಕೊಡಬೇಕಾಗಲಿದೆ. ಬೇಸಿಗೆಯ ಸಮಯದಲ್ಲಿ ಅಗ್ನಿಯ ಕುರಿತು ಹೆಚ್ಚಿನ ಜಾಗೃತಿ ವಹಿಸುವ ಅವಶ್ಯಕತೆಯಿದೆ. ನನ್ನ ಕ್ಷೇತ್ರವ್ಯಾಪ್ತಿಯಲ್ಲಿ  ಭದ್ರತೆಗೆ ಹೆಚ್ಚಿನ ಒತ್ತು ನೀಡಿ ಕಾರ್ಯ ನಿರ್ವಹಿಸುತ್ತೇನೆ ಎಂದರು. ಜನತೆ ಆದಷ್ಟು ಜಾಗರೂಕರಾಗಿ ಅಗ್ನಿ  ಅನಾಹುತಗಳು ಸಂಭವಿಸದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.

ಈ ಸಂದರ್ಭ ಅಧಿಕಾರಿಗಳಾದ ನಾಗರಾಜ್ ಅರಸ್, ಭರತೇಶ್ ಕುಮಾರ್, ಶ್ರೀನಿವಾಸ್, ಗೋಪಿನಾಥ್, ಗುರುರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

comments

Related Articles

error: