ಪ್ರಮುಖ ಸುದ್ದಿ

ನ.16-18 : ಕಡಲೆ ಕಾಯಿ ಪರಿಷೆ, ಚಿತ್ರ ಪರಿಷೆ ಮಲೇಶ್ವರ ಮರೆಯಲಾರದ ಮಧುರ ನೆನಪಿನ ಗಾನ ಸಂಗಮ

ರಾಜ್ಯ(ಬೆಂಗಳೂರು)ನ.14:-  ಹುಣ್ಣಿಮೆ ಹಾಡು 113 ಕಡಲೆ ಕಾಯಿ ಪರಿಷೆ, ಚಿತ್ರ ಪರಿಷೆ ಮಲೇಶ್ವರ ಮರೆಯಲಾರದ ಮಧುರ ನೆನಪಿನ ಗಾನ ಸಂಗಮ ಕಾರ್ಯಕ್ರಮವನ್ನು ಇದೇ 16ರಿಂದ 18ರವರೆಗೆ ಆಯೋಜಿಸಲಾಗಿದೆ ಎಂದು ಕಾಡು ಮಲೇಶ್ವರ ಗೆಳೆಯರ ಬಳಗ ಅಧ್ಯಕ್ಷ ಬಿ.ಕೆ.ಶಿವರಾಂ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಹುಣ್ಣಿಮೆ ಹಾಡು -125 ದಶಮಾನೋತ್ಸವ ಎಂಬ ಅಪರೂಪದ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಗಿದೆ. ಪ್ರತಿ ವರ್ಷ ಹುಣ್ಣಿಮೆ ಹಾಡು ವಾರ್ಷಿಕ ಪ್ರಶಸ್ತಿ ನೀಡಲಾಗುತ್ತಿದೆ. ಕಳೆದವರ್ಷ ಪದ್ಮಶ್ರೀ ದಿವಂಗತ ಸೂಲಗತ್ತಿ ನರಸಮ್ಮ, ಪರಿಸರ ಸಂರಕ್ಷಕ ರಾಮೇಗೌಡರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ ಈ ವರ್ಷ ಚೌಡಿಕೆ ರಾಧಕ್ಕ ಎಂಬವರಿಗೆ, ಅಪಘಾತಗಳ ಅಪದ್ಬಾಂಧವ ಹಸನಬ್ಬ ಅವರಿಗೆ ಹುಣ್ಣಿಮೆ ಹಾಡು ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.

ಈ ಬಾರಿ ಆಹಾರ ಪರಿಷೆಯನ್ನು ನಡೆಸಲಾಗುತ್ತಿದೆ. ಈ ಬಾರಿಯೂ ಮಲೇಶ್ವರದ 15ನೇ ಕ್ರಾಸ್ ನಲ್ಲಿ ಕೂಡ ಹಸಿರು ಚೈತನ್ಯವನ್ನು ಹಮ್ಮಿಕೊಳ್ಳಲಾಗಿದೆ. ಮೂರು ದಿನಗಳು ನಡೆಯುವ ಕಾರ್ಯಕ್ರಮ ದಲ್ಲಿ ಉಳವಿ ಮಠದ ಬಳೆಗಳನ್ನು ಹೆಣ್ಣು ಮಕ್ಕಳಿಗೆ ನೀಡಲಾಗುವುದು ಎಂದು ತಿಳಿಸಿದರು.

ಚಿತ್ರ ಪರಿಷೆಯಲ್ಲಿ ವಿಶೇಷವಾಗಿ ಕುಂಭಾರಿಕೆ ಕಲೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಆಹಾರ ಪರಿಷೆ, ಕಡಲೆ ಕಾಯಿ ಪರಿಷೆಯಲ್ಲಿ ಕರಾವಳಿ ಭಾಗದ ವಿಶೇಷ ಬೆಲ್ಲ ಮಾರಾಟಕ್ಕೆ ಅವಕಾಶ ಒದಗಿಸಲಾಗುತ್ತಿದೆ. ತರಕಾರಿ, ಬೀದಿ ವ್ಯಾಪಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಅತಿಥಿಗಳಿಗೆ ತರಕಾರಿ ಪುಷ್ಪ ಗುಚ್ಛ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: