ಮೈಸೂರು

ನ.17 :  ಅಂತರರಾಷ್ಟ್ರೀಯ ಲಯನ್ಸ್ ಸಮೂಹದಿಂದ ‘ಕನ್ನಡ ರಾಜ್ಯೋತ್ಸವ’

ಮೈಸೂರು, ನ.14:- ನಗರದ ಅಂತರರಾಷ್ಟ್ರೀಯ ಲಯನ್ಸ್ ಸಮೂಹ, ಜಿಲ್ಲೆ 317-ಎ ವತಿಯಿಂದ ನ.17 ರಂದು ಭಾನುವಾರ ಲಯನ್ಸ್ ಕನ್ನಡ ರಾಜ್ಯೋತ್ಸವವನ್ನು ಆಯೋಜಿಸಲಾಗಿದೆ.

ಕಾರ್ಯಕ್ರಮದ ಉದ್ಘಾಟನೆಯನ್ನು ಅಂದು ಸಂಜೆ 5 ಗಂಟೆಗೆ ಕಲಾಮಂದಿರದಲ್ಲಿ ಲಯನ್ಸ್ ಜಿಲ್ಲಾ ರಾಜ್ಯಪಾಲ ಡಾ.ನಾಗರಾಜ್ ವಿ.ಬೈರಿಯವರು ನಡೆಸಿಕೊಡಲಿದ್ದು, ಅಧ್ಯಕ್ಷತೆಯನ್ನು ಹೆಚ್.ಎಸ್,ಅಶ್ವತ್‍ನಾರಾಯಣ್‍ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಡಾ.ಜಿ.ಎ.ರಮೇಶ್, ಡಾ.ಪ್ರಭಾಮೂರ್ತಿ, ಕೆ.ಎಲ್.ರಾಜಶೇಖರ್, ಜಿಲ್ಲಾ ರಾಯಭಾರಿ ಎಸ್.ಜಯರಾಮು, ಜಿಲ್ಲಾ ಸಂಪುಟ ಕಾರ್ಯದರ್ಶಿ ಹಾಗೂ ಜಿಲ್ಲಾ ಸಂಪುಟ ಖಜಾಂಚಿ ಎನ್.ಗಂಗಾಧರಪ್ಪನವರು ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸಾಹಿತ್ಯ ಕ್ಷೇತ್ರದ ಹನೂರು ಚೆನ್ನಪ್ಪ, ರಂಗಭೂಮಿ ಕ್ಷೇತ್ರದ ಉದಯಕುಮಾರ್, ವಿಜ್ಞಾನ ಮತ್ತು ತಾಂತ್ರಿಕ ಕ್ಷೇತ್ರದ ಟಿ.ಎನ್.ನಾಗಭೂಷಣ್, ಅಂತರರಾಷ್ಟ್ರೀಯ ಯೋಗಪಟು ಖುಷಿ ಹಾಗೂ ಸಂಗೀತ ಕ್ಷೇತ್ರದ ಆರ್.ಎಂ.ಸುಮಂತ್ ವಶಿಷ್ಠರವರನ್ನು ಸನ್ಮಾನಿಸಲಾಗುವುದು. ಇದರ ಜೊತೆಗೆ ಸುಗಮ ಸಂಗೀತ, ನೃತ್ಯ, ಹಾಸ್ಯ ಹಾಗೂ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದ ನಂತರ ಎಲ್ಲರಿಗೂ ಸಿಹಿ ವಿತರಿಸಲಾಗುವುದು ಎಂದು ಹೆಚ್.ಎಸ್.ಅಶ್ವತ್‍ನಾರಾಯಣ್‍ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಾರ್ಯಕ್ರಮಕ್ಕೆ ಉಚಿತ ಪ್ರವೇಶ. ಹೆಚ್ಚಿನ ಮಾಹಿತಿಗೆ ಮೊಬೈಲ್ 9449132379 ಸಂಪರ್ಕಿಸಬಹುದು. (ಎಸ್.ಎಚ್)

Leave a Reply

comments

Related Articles

error: