ಪ್ರಮುಖ ಸುದ್ದಿಮೈಸೂರು

ಕ್ಷೇತ್ರದ ಮತದಾರರನ್ನು ವಂಚಿಸಿದ ಅನರ್ಹ ಶಾಸಕರು : ಕಿಡಿ

ಮೈಸೂರು. ನ.14 : ಸಮ್ಮಿಶ್ರ ಸರ್ಕಾರ ಉರುಳಿಸಿ ಅನರ್ಹರಾಗಿದ್ದ ಶಾಸಕರಿಗಾ ಬಿಜೆಪಿ ಸೇರುತ್ತಿರುವುದು ಆ ಕ್ಷೇತ್ರದ ಮತದಾರರಿಗೆ ಮಾಡಿದ ವಂಚನೆಯಾಗಿದೆ ಎಂದು ನಗರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗೂ ವಕೀಲರಾದ ಜೆ.ಎನ್.ಲಕ್ಷ್ಮಣ್ ಕಿಡಿಕಾರಿದರು.

.ಎಲೆಕ್ಟ್ರಾನಿಕ್ ಮತಯಂತ್ರದ ಬಗ್ಗೆ ಈಗಾಗಲೇ ಹಲವು ಅನುಮಾನ ವ್ಯಕ್ತವಾಗಿದ್ದು ಆದ್ದರಿಂದ ಪ್ರಸ್ತುತ ಉಪಚುನಾವಣೆಯಲ್ಲಿ ಮತ ಪತ್ರಗಳನ್ನು ಬಳಸಿ ಚುನಾವಣೆ ನಡೆಸಲಿ, ಅಲ್ಲದೇ, ಚುನಾವಣೆ ಘೋಷಣೆಯಾಗಿ ಕ್ಷೇತ್ರದಲ್ಲಿ ನೀತಿ ಸಂಹಿತೆ ಜಾರಿಯಿದ್ದರೂ ಸಹ ಸರ್ಕಾರ ಎಗ್ಗಿಲ್ಲದೇ ಸರ್ಕಾರಿ ಕಾರ್ಯಕ್ರಮಗಳಿಗೆ ಚಾಲನೆ ನೀಡುತ್ತಿರುವುದು ಚುನಾವಣಾ ನೀತಿ ಸಂಹಿತಿಯ ಸ್ಪಷ್ಟ ಉಲ್ಲಂಘನೆ, ಈ ಬಗ್ಗೆ ಮಾಹಿತಿ ಇದ್ದರೂ ಸಹ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ ಎಂದು ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಅನರ್ಹ ಶಾಸಕರ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಸ್ವಾಗತಿಸಿದ ಅವರು, ಮತದಾರರ ತೀರ್ಮಾನವೇ ಅಂತಿಮ ಎಂಬ ನಿರ್ಣಯವನ್ನು ಕೋರ್ಟ್ ಕೈಗೊಂಡಿದ್ದು, ಆದ್ದರಿಂದ ಮತದಾರರು ಜಾಗೃತರಾಗಬೇಕೆಂದು ಕರೆ ನೀಡಿದರು.

ವಕೀಲರಾದ ಎಂ.ಎಸ್.ನವೀನ್, ಎಸ್.ಎಸ್.ವೈದ್ಯನಾಥ್ ಗೋಷ್ಠಿಯಲ್ಲಿ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: