ಕರ್ನಾಟಕಪ್ರಮುಖ ಸುದ್ದಿ

ಅಂಬರೀಶ್ ಅವರ ಮೊದಲ ಪುಣ್ಯತಿಥಿ: ಸಮಾಧಿಗೆ ಪೂಜೆ ಸಲ್ಲಿಸಿದ ಸುಮಲತಾ, ಅಭಿಷೇಕ್

ಬೆಂಗಳೂರು,ನ.14-ಇಂದು ರೆಬೆಲ್ ಸ್ಟಾರ್ ಅಂಬರೀಶ್ ಅವರ ಮೊದಲ ಪುಣ್ಯತಿಥಿ. ಈ ಹಿನ್ನೆಲೆಯಲ್ಲಿ ನಗರದ ಕಂಠೀರವ ಸ್ಟುಡಿಯೋದಲ್ಲಿ ಅವರ ಸಮಾಧಿಗೆ ಪೂಜೆ ಸಲ್ಲಿಸಲಾಯಿತು.

ಅಂಬರೀಶ್ ಪತ್ನಿ ಸುಮಲತಾ ಅಂಬರೀಶ್, ಮಗ ಅಭಿಷೇಕ್ ಅಂಬರೀಶ್ ಸಮಾಧಿಗೆ ಪೂಜೆ ಸಲ್ಲಿಸಿ ಅಂಬಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಈ ವೇಳೆ ನಟ ದರ್ಶನ್, ರಾಕ್‍ಲೈನ್ ವೆಂಕಟೇಶ್ ಇತರರು ಇದ್ದರು.

ಸುಮಲತಾ ಮಾತನಾಡಿ, ಒಂದು ವರ್ಷ ಎಷ್ಟು ಬೇಗ ಕಳೆದಿದೆ. ಎಲ್ಲೇ ಹೋದರೂ ಅವರ ನೆನಪು ಮರುಕಳಿಸುತ್ತದೆ. ನಾವಿಂದು ಹೀಗಿರಲು ಅವರ ಮಾರ್ಗದರ್ಶನ, ಅವರು ಹಾಕಿಕೊಟ್ಟ ದಾರಿಯೇ ಕಾರಣ. ಅವರ ಪುಣ್ಯತಿಥಿ ಅಂಗವಾಗಿ ಇಂದು ಪೂಜೆ ಸಲ್ಲಿಸಲಾಗಿದೆ ಎಂದ ಅವರು, ರಾಜಕೀಯದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಸ್ಮಾರಕದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅರಮನೆ ಮೈದಾನದ ಗಾಯತ್ರಿ ವಿಹಾರದ ವೃಕ್ಷ ಹಾಲ್‌ನಲ್ಲಿ ‘ಸ್ನೇಹ ಸಾಗರ, ಪ್ರೀತಿ ಅಜರಾಮರ’ ಎಂಬ ಟೈಟಲ್‌ನೊಂದಿಗೆ ಅಂಬರೀಶ್ ಅವರ ಪುಣ್ಯತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಬಂಧಿಕರು, ಕಲಾವಿದರು, ಆತ್ಮೀಯರು, ಅಭಿಮಾನಿಗಳು ಪಾಲ್ಗೊಂಡಿದ್ದರು.

ಅಂಬರೀಶ್ ನ.24 ರಂದು ಇಹಲೋಕ ತ್ಯಜಿಸಿದ್ದರು. ತಿಥಿ ಪ್ರಕಾರ ಗುರುವಾರವೇ ಬಂದಿರೋದರಿಂದ ಅಂಬಿ ಕುಟುಂಬಸ್ಥರು ಹತ್ತು ದಿನ ಮುಂಚಿತವಾಗಿ ಪುಣ್ಯತಿಥಿ ಮಾಡಿದ್ದಾರೆ. (ಎಂ.ಎನ್)

 

Leave a Reply

comments

Related Articles

error: