ಪ್ರಮುಖ ಸುದ್ದಿಮೈಸೂರು

ನ.17ರಂದು ಲಯನ್ಸ್ ಕ್ಲಬ್ ನಿಂದ ‘ಯೋಗಕ್ಷೇಮ ಮೇಳ’

ಮೈಸೂರು.ನ.14 :ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ಲಯನ್ಸ್ ಕ್ಲಬ್ ಪಶ್ಚಿಮ ವಲಯದಿಂದ ಮಾನಸಿಕ, ದೈಹಿಕ ಮತ್ತು ಯೋಗ ಕ್ಷೇಮ ಬಗ್ಗೆ ಮೇಳವನ್ನು ನ.17ರಂದು ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷರಾದ ಡಾ.ಮಹೇಶ್ ರಾವ್ ತಿಳಿಸಿದರು.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂದು ಬೆಳಗ್ಗೆ 6.30 ರಿಂದ 5 ಕಿಮಿ ಆರೋಗ್ಯ ನಡಿಗೆ, 8.30ಕ್ಕೆ ಯೋಗ ಗುರು ಭರತ್ ಶೆಟ್ಟಿಯವರಿಂದ ಯೋಗನಿದ್ರೆ ತರಬೇತಿ, ನಂತರ ಕಣ್ಣು ಮತ್ತು ಆರೋಗ್ಯ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದರು.

ಮೂತ್ರಪಿಂಡ ರೋಗಿಗಳಿಗೆ ಆರ್ಥಿಕ ಸಹಾಯ ನೀಡುವ ಸುದ್ದುದೇಶದಿಂದ ಅಂದು ಸಂಜೆ 6 ಗಂಟೆಗೆ, ಜಗನ್ಮೋಹನ ಅರಮನೆಯಲ್ಲಿ ಖ್ಯಾತ ಪೀಟಿಲು ವಾದಕ ಡಾ.ಮೈಸೂರು ಮಂಜುನಾಥ ಮತ್ತು ಕೊಳಲು ವಾದಕ ಪಂಡಿತ್ ಪ್ರವೀಣ್ ಗೋಡ್ಕಿಂಡಿಯವರಿಂದ ‘ಸಂಗೀತ ಜುಗಲಬಂದಿ’ ಏರ್ಪಡಿಸಿದ್ದು, ಪ್ರತಿ ಟಿಕೆಟ್ ಗೂ 250 ರೂ.ಗಳಿರುವುದು ಎಂದು ತಿಳಿಸಿದರು.

ಮೂತ್ರ ಪಿಂಡ ರೋಗಿಗಳ ದತ್ತಿ ನಿಧಿ ಸ್ಥಾಪಿಸಿಕೊಂಡು 2008ರಿಂದಲೂ ಅವರ ಸಹಾಯಾರ್ಥ ಚಾರಿಟಿ ಶೋಗಳನ್ನು ನಡೆಸುತ್ತಿದ್ದು, ಸಂಗ್ರಹವಾದ ಹಣವನ್ನು ದತ್ತಿನಿಧಿಗೆ ಸಂದಾಯಗೊಳಿಸಲಾಗುವುದು ಎಂದರು. ಅಲ್ಲದೇ ಆರೋಗ್ಯ ನಡಿಗೆಗೆ ರೂ.100 ಗಳ ಪ್ರವೇಶ ದರವಿದೆ ಎಂದು ತಿಳಿಸಿದರು.

ಲಯನ್ಸ್ ಕ್ಲಬ್ ಕಾರ್ಯದರ್ಶಿ ನಾಗರಾಜ್, ರವಿಚಂದ್ರ ಕುಲಕರ್ಣಿ, ಧರ್ಮೇಂದ್ರ ಹಾಗೂ ಇತರರು ಗೋಷ್ಠಿಯಲ್ಲಿ ಉಪಸ್ಥಿತರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: