ಮೈಸೂರು

ಕೆ.ಎಂ.ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ :ಉಚಿತ ಹೆಲ್ಮೆಟ್ ವಿತರಣೆ

ಮೈಸೂರಿನ ಕೆ.ಎಂ.ಪ್ರವೀಣ್ ಕುಮಾರ್ ಚಾರಿಟೇಬಲ್ ಟ್ರಸ್ಟ್ ನ 8ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಹೆಲ್ಮೆಟ್ ವಿತರಣೆ ಮತ್ತು ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು.

ಗುರುವಾರ ಮೈಸೂರಿನ ಸಂಸ್ಕೃತ ಪಾಠಾಶಾಲಾ ಸಿಗ್ನಲ್ ಬಳಿ  ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು,  ಬಿಜೆಪಿ ನಗರಾಧ್ಯಕ್ಷ ಡಾ.ಮಂಜುನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.  ಹೆಲ್ಮೆಟ್ ಧರಿಸಿ ಬಂದ ವಾಹನ ಸವಾರರಿಗೆ ಸಿಹಿ ವಿತರಿಸಲಾಯಿತು.

ಹೆಲ್ಮೆಟ್ ಇಲ್ಲದೆ ಸಾಗುತ್ತಿದ್ದ ವಾಹನ ಸವಾರರೋರ್ವರು ತನ್ನ ಹೆಲ್ಮೆಟ್ ಕಳ್ಳತನವಾಗಿದೆ. ಇದರಿಂದ ಮತ್ತೊಂದು ಹೆಲ್ಮೆಟ್ ಖರೀದಿಗೆ ಹೋಗುತ್ತಿದ್ದೆ. ಆದರೆ ದಂಡ ಪಾವತಿಸಿದ ನಂತರ ಇಲ್ಲಿಯೇ ಉಚಿತ ಹೆಲ್ಮೆಟ್ ಸಿಕ್ಕಿದೆ. ಇಂದಿನಿಂದಲೇ ನಾನೂ ಸಹ ಹೆಲ್ಮೆಟ್ ಧರಿಸಿ ವಾಹನ ಚಾಲನೆ ಮಾಡುತ್ತೇನೆ.  ನಮಗಾಗಿಯೇ ಕಾನೂನು ಮತ್ತು ಸುರಕ್ಷತೆ ಇರೋದು. ಅದನ್ನು ಕಟ್ಟುನಿಟ್ಟಾಗಿ ಪಾಲಿಸುತ್ತೇನೆ ಎಂದು ಹೇಳಿದರು.

ಇದೇ ವೇಳೆ ಹೆಲ್ಮೆಟ್ ಧರಿಸದೇ ವಾಹನ ಚಲಾಯಿಸುತ್ತಿದ್ದವರನ್ನು ಹಿಡಿದ  ಎಎಸ್ಐ ರಮೇಶ್ ಮಾತನಾಡಿ, ಇದೊಂದು ಉತ್ತಮವಾದ ಕಾರ್ಯಕ್ರಮ. ಹಿಂಬದಿ ಸವಾರರು ಇನ್ನು ಮುಂದೆ ಹೆಲ್ಮೆಟ್ ಧರಿಸದಿದ್ದರೆ, ಸ್ಥಳದಲ್ಲೇ ಅವರಿಗೆ ದಂಡ ವಿಧಿಸಲಾಗುವುದು.  ನಂತರ ಅವರು ಅಲ್ಲಿಯೇ ಹೊಸ ಹೆಲ್ಮೆಟ್ ತಂದು ಹಾಕಿಕೊಂಡು ಬೈಕ್ ನಲ್ಲಿ ಮರಳಬೇಕು. ಇಲ್ಲವಾದರೆ ಅಂಥಹವರ ವಾಹನವನ್ನು ಠಾಣೆಗೆ ಕೊಂಡೊಯ್ಯಲಾಗುವುದು ಎಂದರು.

ಈ ಸಂದರ್ಭ ಪತ್ರಿಕೋದ್ಯಮಿ ರಾಜಶೇಖರ ಕೋಟಿ, ಸಮಾಜ ಸೇವಕ ಕೆ.ರಘುರಾಂ ವಾಜಪೇಯಿ, ಮಾಜಿ ಪಾಲಿಕೆ ಸದಸ್ಯ ಎಂ.ಡಿ.ಪಾರ್ಥಸಾರಥಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅಶೋಕ್, ವಿಕ್ರಮ್, ಜೋಗಿಮಂಜು, ಅನಿಲ್, ಅಜಯ್ ಶಾಸ್ತ್ರಿ ಸೇರಿದಂತೆ ಹಲವರು ಭಾಗಿಯಾಗಿದ್ದರು.

Leave a Reply

comments

Related Articles

error: