
ಮೈಸೂರು
ಸಿಸಿಬಿ ಪೊಲೀಸರ ಭರ್ಜರಿ ಕಾರ್ಯಾಚರಣೆ : ಗಾಂಜಾ ಮಾರುತ್ತಿದ್ದ ಮೂವರ ಬಂಧನ
ಮೈಸೂರು,ನ.14:- ಮೈಸೂರು ನಗರದ ಸಿಸಿಬಿ ಪೊಲೀಸರು 13/11/2019ರಮದು ಗಾಂಜಾ ಅಡ್ಡೆಯ ಮೇಲೆ ಭರ್ಜರಿ ಕಾರ್ಯಾಚರಣೆ ನಡೆಸಿ ಮೈಸೂರು ನಗರದ ಮಂಡಿ ಪೊಲೀಸ್ ಠಾಣಾ ಸರಹದ್ದು ಅಶೋಕ ರಸ್ತೆಯಲ್ಲಿರುವ ಮೈಸೂರು ಕೇಂದ್ರ ಕಾರಾಗೃಹದ ಮುಂಭಾಗದ ರಸ್ತೆಯಲ್ಲಿ ಗಾಂಜಾ ಮಾರಾಟ ದಂಧೆಯಲ್ಲಿ ತೊಡಗಿದ್ದ ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.
ಬಂಧಿತರನ್ನು ಇಮ್ರಾನ್ ಬಿನ್ ಅಲ್ ಬಕ್ಷಾ(39) ಉರ್ದು ಸ್ಕೂಲ್ ಹತ್ತಿರ, ಕೆ.ಟಿ.ಸ್ಟ್ರೀಟ್, ಮಂಡಿ ಮೊಹಲ್ಲಾ ಮೈಸೂರು, ಪುಟ್ಟೇಗೌಡ ಬಿನ್ ಲೇಟ್ ದಾಸೇ ಗೌಡ(44)ವರ್ಷ ಪಾಲಹಳ್ಳಿ ಗ್ರಾಮ ಬೆಳಗೊಳ ಹೋಬಳಿ, ಶ್ರೀರಂಗಪಟ್ಟಣ ತಾಲೂಕು ಮಂಡ್ಯ ಜಿಲ್ಲೆ, ಸೈಯ್ಯದ್ ಅಯೂಬ್ @ಚಿಕ್ಕಪ್ಪ@ ಚಿಚ್ಚ ಬಿನ್ ಸೈಯದ್ ಸಾಬ್(60) ಲಷ್ಕರ್ ಮೊಹಲ್ಲಾ ಮೈಸೂರು, ಎಂದು ಗುರುತಿಸಲಾಗಿದ್ದು, ಇವರನ್ನು ವಶಕ್ಕೆ ಪಡೆದು ಅವರ ಬಳಿಯಿದ್ದ 4ಕೆ.ಜಿ 300ಗ್ರಾಂ ಗಾಂಜಾ, ಗಾಂಜಾ ಸಾಗಾಟ ಮಾಡುತ್ತಿದ್ದ ಹೋಂಡಾ ಆ್ಯಕ್ಟಿವಾ ದ್ವಿಚಕ್ರವಾಹನ ಹಾಗೂ 32,000ರೂ.ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಈ ದಾಳಿ ಕಾರ್ಯವನ್ನು ಮೈಸೂರು ನಗರದ ಉಪ ಪೊಲೀಸ್ ಆಯುಕ್ತರಾದ ಮುತ್ತುರಾಜ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿಯ ಎಸಿಪಿ ಸಿ.ಮರಿಯಪ್ಪನವರ ಉಸ್ತುವಾರಿಯಲ್ಲಿ ಸಿಸಿಬಿಯ ಪೊಲೀಸ್ ಇನ್ಸಪೆಕ್ಟರ್ ಮಲ್ಲೇಶ್ ಎ ಎ.ಎಸ್.ಐ ಆರ್.ರಾಜು, ಸಿಬ್ಬಂದಿಯವರಾದ ಜೋಸೆಫ್ ನರ್ಹೋನಾ, ಡಬ್ಲ್ಯೂಡಿ ದೀಪಕ್, ಎಂ.ಆರ್.ಗಣೇಶ್, ಡಿ.ಶ್ರೀನಿವಾಸ ಪ್ರಸಾದ್, ವಿ.ರಘು, ಚಾಲಕರುಗಳಾದ ಶ್ರೀನಿವಾಸ, ಶಿವಕುಮಾರ್ ಮೋಹನ್ ಪಾಲ್ಗೊಂಡಿದ್ದರು. (ಕೆ.ಎಸ್,ಎಸ್.ಎಚ್)