ಸುದ್ದಿ ಸಂಕ್ಷಿಪ್ತ

ಆರೋಗ್ಯಕ್ಕಾಗಿ ಸಂಗೀತ.19.

ಮೈಸೂರು.ನ.14 : ಉತ್ತಮ ಆರೋಗ್ಯಕ್ಕೆ ಸಂಗೀತ ಕಾರ್ಯಕ್ರಮವನ್ನು ರಾಗ ಮ್ಯೂಸಿಕ್ ಅಕಾಡೆಮಿಯಿಂದ ದಿ.19ರ ಸಂಜೆ 5.30 ರಿಂದ ಕುವೆಂಪು ನಗರದ ಪ್ರಜ್ಞಾ ಕುಟೀರ ಆಯುರ್ವೇದ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ವಿದುಷಿ ಅರ್ಚನಾ ಮತ್ತು ಸಮ್ನವಿ ಅವರಿಂದ ಸಂಗೀತ ಕಛೇರಿ, ವಿದ್ವಾನ್ ಎಂ.ಕೇಶವ್ ವಯೊಲಿನ್, ವಿದ್ವಾನ್ ಅಕ್ಷಯ್ ಆನಂದ್ ಮೃದಂಗ ಹಾಗೂ ವಿದ್ವಾನ್ ಶರತ್ ಕೌಶಿಕ್ ಘಟಂನಲ್ಲಿ ಸಾಥ್ ನೀಡಲಿದ್ದಾರೆ.

ಇದಕ್ಕೂ ಮುನ್ನಾ ಡಾ.ಎನ್.ವಿ.ಕೃಷ್ಣಮೂರ್ತಿಯವರು ಉತ್ತಮ ಆರೋಗ್ಯಕ್ಕಾಗಿ ಆಯುರ್ವೇದ ಮತ್ತು ಯೋಗ ವಿಷಯವಾಗಿ ಉಪನ್ಯಾಸ ನೀಡಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: