ಸುದ್ದಿ ಸಂಕ್ಷಿಪ್ತ

ಕನಕ ಜಯಂತಿ : ನಂದಿನಿ ಐಸ್ ಕ್ರೀಂ ಮಳಿಗೆ ಉದ್ಘಾಟನೆ ನಾಳೆ

ಮೈಸೂರು.ನ.14 : ಚಾಮುಂಡಿಪುರಂ ವೃತ್ತದ ವಿನಾಯಕ ಬೇಕರಿಯಲ್ಲಿ ನಂದಿನಿ ಐಸ್ ಕ್ರೀಂ ಮಳಿಗೆ ಉದ್ಘಾಟಿಸುವ ಮೂಲಕ ಜಿಲ್ಲಾ ನಂದಿನಿ ಹಾಲು ಮಾರಾಟಗಾರರ ಸಂಘದಿಂದ ಕನಕ ಜಯಂತಿಯನ್ನ ಆಚರಿಸಲಾಗುತ್ತಿದೆ.

ದಿ.15ರ ಮಧ್ಯಾಹ್ನ 1 ಗಂಟೆಗೆ ಮಹಾನಗರ ಪಾಲಿಕೆ ಸದಸ್ಯ ರಾಮಪ್ರಸಾದ್ ಉದ್ಘಾಟಿಸಲಿದ್ದು, ನಾಳೆಯಿಂದ ದಿ.30ರವರೆಗೆ ನಂದಿನಿ ಹಾಲು ಖರೀದಿಸುವ ಪ್ರತಿ ಗ್ರಾಹಕರಿಗೂ ನಂದಿನಿ ಐಸ್ ಕ್ಯಾಂಡಿ ಉಚಿತವಾಗಿ ನೀಡಲಾಗುವುದು ಎಂದು ಅಧ್ಯಕ್ಷರಾದ ಹೆಚ್.ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: