ಮೈಸೂರು

ನಂಜನಗೂಡು ಪೊಲೀಸ್‌ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ಪ್ರಭಾಕರ್‌ರಾವ್‌ ಸಿಂಧೆ ಅಧಿಕಾರ ಸ್ವೀಕಾರ

ಮೈಸೂರು,ನ.15:-  ನಂಜನಗೂಡು ಪೊಲೀಸ್‌ ಉಪ ವಿಭಾಗದ ನೂತನ ಡಿವೈಎಸ್ಪಿಯಾಗಿ ಪ್ರಭಾಕರ್‌ರಾವ್‌ ಸಿಂಧೆ ನಿನ್ನೆ  ಅಧಿಕಾರ ಸ್ವೀಕರಿಸಿದರು.

ಡಿವೈಎಸ್ಪಿಯಾಗಿದ್ದ ಮಲ್ಲಿಕ್‌  ಅವರು ಮೈಸೂರು ಪೊಲೀಸ್‌ ಅಕಾಡೆಮಿಗೆ ವರ್ಗಾವಣೆಗೊಂಡಿದ್ದರಿಂದಾಗಿ ನಿನ್ನೆ ನಗರದ ಡಿವೈಎಸ್ಪಿ ಕಚೇರಿಯಲ್ಲಿ ಮಲ್ಲಿಕ್‌ ನೂತನ ಡಿವೈಎಸ್‌ಪಿಗೆ ಅಧಿಕಾರ ಹಸ್ತಾಂತರಿಸಿದರು.

ಬಳಿಕ  ಸುದ್ದಿಗಾರರೊಂದಿಗೆ ಮಾತನಾಡಿದ ಡಿವೈಎಸ್ಪಿ ಪ್ರಭಾಕರ್‌ ರಾವ್‌ ಸಿಂಧೆ ಶ್ರೀಕಂಠೇಶ್ವರಸ್ವಾಮಿಯವರ ನಂಜನಗೂಡಿನಲ್ಲಿ ಈ ಹಿಂದೆ ವೃತ್ತ ನಿರೀಕ್ಷಕನಾಗಿ ಕೆಲಸ ನಿರ್ವಹಿಸಿದ ಅನುಭವವನ್ನು ಹೊಂದಿರುವುದರಿಂದ ಡಿವೈಎಸ್ಪಿಯಾಗಿ ಉತ್ತಮ ಕೆಲಸವನ್ನು ನಿರ್ವಹಿಸಲು ಅನುಕೂಲವಾಗಲಿದೆ. ಸಾರ್ವಜನಿಕರು ಮತ್ತು ಸಿಬ್ಬಂದಿವರ್ಗದವರ ಸಹಕಾರವನ್ನು ಪಡೆದು ಉತ್ತಮವಾಗಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಾಗುವುದು. ಜೊತೆಗೆ ನಗರದಲ್ಲಿಸಂಚಾರ ದಟ್ಟಣೆ ಅಧಿಕವಾಗಿದ್ದು ವಾಹನ ಸಂಚಾರದಲ್ಲಾಗುತ್ತಿರುವ ಅಡಚಣೆಯನ್ನು ನಿಯಂತ್ರಿಸಲು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕರಿಗೆ ನೆರವಾಗುವುದಾಗಿ ತಿಳಿಸಿದರು. ಈ ಸಂದರ್ಭ ವೃತ್ತ ನಿರೀಕ್ಷಕ ರಾಜಶೇಖರ್‌ ಹಾಗೂ ಸಿಬ್ಬಂದಿವರ್ಗದವರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: