ಕ್ರೀಡೆ

ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಪಿ.ವಿ.ಸಿಂಧು ಔಟ್

ಹಾಂಕಾಂಗ್‌,ನ.15-ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಹೊರಬಿದ್ದಿದ್ದಾರೆ.

ಮಹಿಳಾ ಸಿಂಗಲ್ಸ್ ನ 2ನೇ ಸುತ್ತಿನ ಹಣಾಹಣಿಯಲ್ಲಿ ಸಿಂಧು ಥಾಯ್ಲೆಂಡ್ ಬುಸಾನನ್ಒಂಗ್ಬಮ್ರುಂಗ್ಫನ್ಎದುರು 18-21, 21-11, 16-21 ಗೇಮ್ಗಳಿಂದ ಸೋತು ಸ್ಪರ್ಧೆಯಿಂದ ಹೊರಬಿದ್ದರು. ಇದರೊಂದಿಗೆ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆಲುವಿನ ಬಳಿಕ ಸತತ ವೈಫಲ್ಯಗಳು ಮುಂದುವರಿದಿದೆ.

ಪುರುಷರ ಸಿಂಗಲ್ಸ್ನಲ್ಲಿ ಎಚ್‌.ಎಸ್‌.ಪ್ರಣಯ್‌ 12-21, 19-21 ಗೇಮ್ಗಳಿಂದ ಎರಡನೇ ಶ್ರೇಯಾಂಕದ ಇಂಡೋನೇಷ್ಯಾದ ಜೊನಾಥನ್ಕ್ರಿಸ್ಟೀ ವಿರುದ್ಧ ಸೋತರು. ಇದೇ ವೇಳೆ, ಪರುಪಳ್ಳಿ ಕಶ್ಯಪ್‌ 2ನೇ ಶ್ರೇಯಾಂಕದ ಆಟಗಾರ ಚೈನಾ ತೈಪೆಯ ಚೌ ತಿಯೆನ್ಚೆನ್ಎದುರು 21-12, 21-23, 10-21 ಗೇಮ್ಗಳಿಂದ ಸೋತು ಸ್ಪರ್ಧೆ ಮುಗಿಸಿದ್ದಾರೆ.

ಕಳೆದ ಆಗಸ್ಟ್ ತಿಂಗಳಲ್ಲಿ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ ಗೆಲ್ಲುವ ಮೂಲಕ ಪಿ.ವಿ.ಸಿಂಧು ಇತಿಹಾಸ ಬರೆದಿದ್ದರು. ಆದರೆ ತದಾ ಬಳಿಕ ನಡೆದ ಮೂರು ಟೂರ್ನಿಯಲ್ಲಿ ದ್ವಿತೀಯ ಸುತ್ತು ದಾಟಲು ವಿಫಲವಾಗಿದ್ದಾರೆ. ಚೀನಾ ಓಪನ್, ಕೊರಿಯಾ ಓಪನ್ ಹಾಗೂ ಡೆನ್ಮಾರ್ಕ್ ಓಪನ್ಗಳಲ್ಲಿ ಮುಗ್ಗರಿಸಿದ್ದರು. ಫ್ರೆಂಚ್ ಓಪನ್ನಲ್ಲಿ ಅಂತಿಮ ಎಂಟರ ಹಂತವನ್ನು ತಲುಪಿದರೂ ಅಲ್ಲಿಂದ ಮುಂದಕ್ಕೆ ಸಾಗಲು ಸಾಧ್ಯವಾಗಲಿಲ್ಲ. ಬಳಿಕ ನಡೆ ಫ್ಯೂಜೊ ಚೀನಾ ಓಪನ್ ಟೂರ್ನಿಯಲ್ಲೂ ಮೊದಲ ಸುತ್ತಿನಲ್ಲೇ ನಿರ್ಗಮನದ ಹಾದಿ ಹಿಡಿದಿದ್ದರು.

ಒಟ್ಟಿನಲ್ಲಿ 2016 ರಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ಸಿಂಧುಗೆ ಮುಂದೆ ಕಠಿಣ ಸವಾಲುಗಳು ಎದುರಾಗಲಿದೆ ಎಂಬುದು ಖಾತ್ರಿಯಾಗಿದೆ. ಮುಂದಿನ ವರ್ಷ ಟೋಕಿಯೋ ಒಲಿಂಪಿಕ್ಸ್ ನಡೆಯಲಿರುವ ಹಿನ್ನಲೆಯಲ್ಲಿ ಸಿಂಧು ಪ್ರದರ್ಶನ ಅತ್ಯಂತ ನಿರ್ಣಾಯಕವೆನಿಸಿದೆ. (ಎಂ.ಎನ್)

 

Leave a Reply

comments

Related Articles

error: