ಮೈಸೂರು

ಹೆಚ್.ವಿ.ರಾಜೀವ್ ಅವರಿಗೆ ಸಹಕಾರ ರತ್ನ

ಮೈಸೂರು.ನ.15 : ಜಿಲ್ಲಾ ಸಹಕಾರಿ ಧುರೀಣ ಹೆಚ್.ವಿ.ರಾಜೀವ್ ಅವರ ಕ್ಷೇತ್ರ ಸೇವೆಯನ್ನು ಪರಿಗಣಿಸಿ ‘ಸಹಕಾರ ರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.

66ನೇ ಅಖಿಲ ಭಾರತ ಸಹಕಾರ ಸಪ್ತಾಹದಂಗವಾಗಿ ತುಮಕೂರಿನ ಜೂನಿಯರ್ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ  ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ರಾಜೀವ್ ಅವರಿಗೆ ಸಹಕಾರ ರತ್ನ ಪ್ರಶಸ್ತಿ ನೀಡಿ ಪುರಸ್ಕರಿಸಿದರು.

ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಸಚಿವ ಎಸ್.ಆರ್.ಬೊಮ್ಮಾಯಿ ಮತ್ತಿತರರು ಹಾಜರಿದ್ದರು. ಇವರ ಸಾಧನೆಗೆ ಹೆಚ್.ವಿ.ರಾಜೀವ್ ಸ್ನೇಹ ಬಳಗ ಮತ್ತು ಹಸಿರು ಮೈಸೂರು ಬಳಗದ ಪದಾಧಿಕಾರಿಗಳು ಶುಭ ಕೋರಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: