ಸುದ್ದಿ ಸಂಕ್ಷಿಪ್ತ

ನ.17ರಂದು ಗಮಕಕಲಾ ಕೇಂದ್ರ ಉದ್ಘಾಟನೆ- ಕೃತಿ ಬಿಡುಗಡೆ

ಮೈಸುರು.ನ.15 : ಲಕ್ಷ್ಮೀಶಂಕರ ಗಮಕಕಲಾ ಕೇಂದ್ರ ಉದ್ಘಾಟನೆ ಹಾಗೂ ಡಾ.ವಿಜಯಮಾಲಾ ರಂಗನಾಥ್ ಅವರ ಪಂಚಕೃತಿಗಳ ಬಿಡುಗಡೆಯನ್ನು ನ.17ರ ಬೆಳಗ್ಗೆ 10 ಗಂಟೆಗೆ ಸದ್ವಿದ್ಯಾ ಶಾಲೆಯ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಗಮಕ ಕೃ.ರಾಮಚಂದ್ರ ಉದ್ಘಾಟಿಸುವರು, ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ ಅಧ್ಯಕ್ಷತೆ. ಸಾಹಿತಿ ಡಾ.ಮಳಲಿ ವಸಂತಕುಮಾರ್, ವಿದ್ವಾಂಸ ಪ್ರೊ.ಜಿ.ಎಸ್.ಭಟ್ಟ, ವೈದ್ಯ ಸಾಹಿತಿ ಡಾ.ಎಸ್.ಪಿ.ಯೋಗಣ್ಣ, ಡಾ.ಜಯರಾಂ ರಂಗಕರ್ಮಿ ಪ್ರೊ.ಎಚ್.ಎಸ್.ಉಮೇಶ್ ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: