ಮೈಸೂರು

ಚುನಾವಣೆಯಲ್ಲಿ ಅಕ್ರಮವಾಗಿ ಹಂಚಲು ಸಂಗ್ರಹಿಸಿಟ್ಟಿದ್ದ 30ಸಾವಿರ ಸೀರೆ ವಶ

ಮೈಸೂರು,ನ.16:- ಹೆಬ್ಬಾಳದ ಕೈಗಾರಿಕಾ ಪ್ರದೇಶದಲ್ಲಿರುವ ಗೋದಾಮೊಂದರ ಮೇಲೆ ದಾಳಿ ನಡೆಸಿದ ಉಪವಿಭಾಗಾಧಿಕಾರಿ ಎ.ಸಿ.ವೆಂಕಟರಾಜು ಮತ್ತು ತಹಶೀಲ್ದಾರ್ ರಮೇಶ್ ಬಾಬು ನೇತೃತ್ವದ ತಂಡ ಚುನಾವಣೆಯಲ್ಲಿ ಅಕ್ರಮವಾಗಿ ಹಂಚಲು ಸಂಗ್ರಹಿಸಿಟ್ಟಿದ್ದ 30ಸಾವಿರ ಸೀರೆಗಳು ಮತ್ತು ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಭಾವಚಿತ್ರವಿರುವ ಕರಪತ್ರಗಳನ್ನು ವಶಪಡಿಸಿಕೊಂಡಿದೆ.

ನಾಗರಾಜು ಎಂಬವರಿಗೆ ಸೇರಿದ ಗೋದಾಮನ್ನು ಜಯರಾಮ ಎಂಬವರು ಅ.15ರಿಂದ ನ.15ರವರೆಗೆ ಬಾಡಿಗೆಗೆ ಪಡೆದಿದ್ದರು. ಇಲ್ಲಿ 425ಚೀಲಗಳಲ್ಲಿ ಒಟ್ಟು 30ಸಾವಿರ ಸೀರೆಗಳನ್ನು ಸಂಗ್ರಹಿಸಲಾಗಿತ್ತು. ಹುಣಸೂರು ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಸಂದರ್ಭದಲ್ಲಿ ಹಂಚುವುದಕ್ಕಾಗಿ ಇಲ್ಲಿ ಸೀರೆಗಳನ್ನು ಇಡಲಾಗಿದೆ ಎಂಬ ಮಾಹಿತಿಯ ಮೇರೆಗೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ಈ ಸಂಬಂಧ ತಹಶೀಲ್ದಾರ್ ರಮೇಶ್ ಬಾಬು ಅವರು ಗೋದಾಮಿನ ಮಾಲೀಕ ನಾಗರಾಜು ಹಾಗೂ ಎಂ.ಕೆ ಜಯರಾಮ ಎಂಬವರ ವಿರುದ್ಧ ವಿಜಯ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: