ಮೈಸೂರು

ಲಿಂಗಾಂಬುದಿ ಕೆರೆಯಲ್ಲಿ ನಾರ್ಥರನ್ ಶೋವೆಲರ್ ಪಕ್ಷಿ ಸಾವು : ಪಕ್ಷಿಪ್ರಿಯರಲ್ಲಿ ಆತಂಕ

ಮೈಸೂರು,ನ.16: –  ಪ್ರತಿ ವರ್ಷ ಸೆಪ್ಟೆಂಬರ್  -ಅಕ್ಟೋಬರ್ ತಿಂಗಳಲ್ಲಿ ಲಿಂಗಾಂಬುದಿ ಕೆರೆಗೆ ಬಂದು ಬೀಡುಬಿಡುವ ನಾರ್ಥರನ್ ಶೋವೆಲರ್ ಪಕ್ಷಿಗಳು ಮೃತಪಟ್ಟಿದ್ದು  ಪಕ್ಷಿಪ್ರಿಯರಲ್ಲಿ ಆತಂಕ ಮೂಡಿಸಿದೆ.

ಇವು ಸೆಪ್ಟೆಂಬರ್ -ಅಕ್ಟೋಬರ್ ತಿಂಗಳಲ್ಲಿ ಲಿಂಗಾಂಬುದಿ ಕೆರೆಗೆ ಬಂದು ಬೀಡು ಬಿಡಲಿರುವ ಈ ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಮಾಡುತ್ತವೆ. ಆದರೆ ಕಳೆದೆರಡು ದಿನಗಳಿಂದ ಪಕ್ಷಿಗಳು ಒಂದೊಂದಾಗಿ ಸಾವನ್ನಪ್ಪುತ್ತಿದ್ದು, ಇಂದು ಐದು ಪಕ್ಷಿಗಳ ಮೃತದೇಹ ಕೆರೆಯ ದಂಡೆಯಲ್ಲಿ ತೇಲುತ್ತಿರುವುದು ವಾಯುವಿಹಾರಿಗಳಿಗೆ ಕಂಡು ಬಂದಿದೆ.

ವಾಯು ವಿಹಾರಿಗಳು ತಕ್ಷಣ  ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದ್ದು, ಸ್ಥಳಕ್ಕೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಮತ್ತು ಸಿಬ್ಬಂದಿ ಭೇಟಿ ನೀಡಿ ಬೋಟ್ ಮೂಲಕ ಇಡೀ ಕೆರೆಯ  ತಪಾಸಣೆ ನಡೆಸಿದರು.   ಈ ಸಂದರ್ಭ  ಮಾತನಾಡಿದ ಅವರು  ಪಕ್ಷಿಗಳ ಮೃತದೇಹದ ಸ್ಯಾಂಪಲ್‍ಗಳನ್ನು ಬೆಂಗಳೂರಿಗೆ ಕಳುಹಿಸಲಾಗುವುದು. ಕೆರೆಯಲ್ಲಿರುವ ಇತರೆ ಪಕ್ಷಿಗಳಿಗೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ ಎಂದು ತಿಳಿಸಿದರು.

ಶೋವೆಲರ್ ಪಕ್ಷಿಗಳು ಸಾವನ್ನಪ್ಪಲು ಕಾರಣವೇನೆಂಬುದು ತಿಳಿದುಬಂದಿಲ್ಲ. ರಾಜಸ್ಥಾನದಲ್ಲೂ ಈ ಪಕ್ಷಿಗಳು ಮೃತಪಟ್ಟಿದ್ದು, ಎರಡೂ ಕಡೆ ಇವುಗಳ ಸಾವಿಗೆ ಸಾಮ್ಯತೆ ಇದೆಯೇ ಎಂಬುದರ ಕುರಿತು ರಾಜಸ್ಥಾನ ಅರಣ್ಯಾಧಿಕಾರಿಗಳೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದೇವೆ ಎಂದು ಹೇಳಿದರು.

ಇವು ವಿಶೇಷ ಪಕ್ಷಿಗಳಾಗಿರುವುದರಿಂದ ಇವುಗಳ ಸಂರಕ್ಷಣೆ ಅತಿಮುಖ್ಯವಾಗಿದೆ. ಹಾಗಾಗಿ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ. ಈ ಕೆರೆಯಲ್ಲಿ ಎಷ್ಟು ಪಕ್ಷಿಗಳು ಮೃತಪಟ್ಟಿವೆ ಎಂಬುದು ಸಂಜೆಯ ವೇಳೆಗೆ ಗೊತ್ತಾಗಲಿದೆ ಎಂದು ತಿಳಿಸಿದ್ದಾರೆ. ಈ ಹಿಂದೆ ಕುಕ್ಕರಹಳ್ಳಿ ಕೆರೆಯಲ್ಲಿಯೂ ಮೂರು ಫೆಲಿಕಾನ್ ಪಕ್ಷಿಗಳು ಮೃತಪಟ್ಟಿದ್ದು ಪಕ್ಷಿ ಪ್ರಿಯರನ್ನು ಆತಂಕಕೀಡು ಮಾಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: