ಕ್ರೀಡೆದೇಶ

ಡಿಡಿಸಿಎ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ರಜತ್ ಶರ್ಮಾ

ನವದೆಹಲಿ,ನ.16- ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ಅಧ್ಯಕ್ಷ ಸ್ಥಾನಕ್ಕೆ ರಜತ್ ಶರ್ಮಾ ಶನಿವಾರ ರಾಜೀನಾಮೆ ನೀಡಿದ್ದಾರೆ.

ರಾಜೀನಾಮೆಯ ನಂತರ ಮಾತನಾಡಿದ ರಜತ್ ಶರ್ಮಾ, ನಾನು ಪ್ರಾಮಾಣಿಕತೆ, ಪಾರದರ್ಶಕತೆಯಿಂದ ಕೆಲಸ ಮಾಡಬೇಕೆಂದು ಬಂದವ. ಆದರೆ ದಿಲ್ಲಿ ಕ್ರಿಕೆಟ್ ಸಂಸ್ಥೆಯಲ್ಲಿ ಅದು ಸಾಧ್ಯವಿಲ್ಲ. ಪಟ್ಟ ಭದ್ರ ಹಿತಾಸಕ್ತಿಗಳ ನಡುವೆ ಕೆಲಸ ಮಾಡುವುದು ಕಷ್ಟ ಎಂದು ಹೇಳಿದ್ದಾರೆ.

ಅಧ್ಯಕ್ಷನಾಗಿದ್ದ ವೇಳೆ ನನ್ನ ಮೇಲೆ ನಂಬಿಕೆ ಇಟ್ಟ ಎಲ್ಲರಿಗೂ ನಾನು ಆಭಾರಿಯಾಗಿದ್ದೇನೆ. ಸಿಕ್ಕ ಅವಕಾಶದಲ್ಲಿ ಸಂಸ್ಥೆಯ ಅಭಿವೃದ್ಧಿಗಾಗಿ ಪ್ರಾಮಾಣಿಕತೆಯಿಂದ ದುಡಿದಿದ್ದೇನೆ ಎಂದರು.

ಹಿರಿಯ ಪತ್ರಕರ್ತರಾಗಿರುವ ರಜತ್ ಶರ್ಮಾ 20 ತಿಂಗಳ ಹಿಂದಷ್ಟೇ ದಿಲ್ಲಿ ಕ್ರಿಕೆಟ್ ಅಸೋಸಿಯೇಶನ್ ನ ಅಧ್ಯಕ್ಷ ಗಾದಿಗೇರಿದ್ದರು.

ಮಾಜಿ ಕೇಂದ್ರ ಸಚಿವ ದಿ. ಅರುಣ್‌ ಜೇಟ್ಲಿ ಅವರ ಬೆಂಬಲದೊಂದಿಗೆ ಶರ್ಮಾ ಕ್ರಿಕೆಟ್‌ ಮಂಡಳಿಗೆ ಸೇರ್ಪಡೆಯಾಗಿದ್ದರು. ಆದರೆ, ಜೇಟ್ಲಿ ಅವರ ನಿಧನದ ಬಳಿಕ ಡಿಡಿಸಿಎನಲ್ಲಿ ಶರ್ಮಾ ಅವರು ನೆಲೆ ಕಳೆದುಕೊಂಡಿದ್ದರು ಎಂದು ಕ್ರಿಕೆಟ್‌ ಮಂಡಳಿಯ ಸದಸ್ಯರು ಹೇಳುತ್ತಾರೆ. (ಎಂ.ಎನ್)

Leave a Reply

comments

Related Articles

error: