ಮೈಸೂರು

ರಫೇಲ್ ಬಗ್ಗೆ ಸುಳ್ಳು ಮಾಹಿತಿ ನೀಡಿ ಸುಳ್ಳು ಸುದ್ದಿ ಹಬ್ಬಿಸಿದ ರಾಹುಲ್ ಗಾಂಧಿ ದೇಶದ ಜನತೆಯ ಕ್ಷಮೆಯಾಚಿಸುವಂತೆ ಒತ್ತಾಯಿಸಿ ಪ್ರತಿಭಟನೆ

ಮೈಸೂರು,ನ.16:- ಭಾರತೀಯ ಜನತಾ ಪಾರ್ಟಿ ಕೃಷ್ಣರಾಜ ಕ್ಷೇತ್ರದ ವತಿಯಿಂದ ಇಂದು  ಮೈಸೂರಿನ ಅಗ್ರಹಾರ ವೃತದಲ್ಲಿ ರಫೇಲ್ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತ್ತು ಸುಳ್ಳು ಸುದ್ದಿ ಹಬ್ಬಿಸಿದ ರಾಹುಲ್ ಗಾಂಧಿ ಹಾಗೂ ಕಾಂಗ್ರೆಸ್ ದೇಶದ ಜನತೆಯ ಕ್ಷಮೆಯಾಚನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಭಾಗವಹಿಸಿದ ನಗರಪಾಲಿಕೆ ವಿರೋಧಪಕ್ಷದ ನಾಯಕ  ಬಿ.ವಿ ಮಂಜುನಾಥ್   ಮಾತನಾಡಿ ರಫೆಲ್ ಯುದ್ಧ ವಿಮಾನ ಖರೀದಿ ವಿಚಾರಕ್ಕೆ ಸಂಬಂಧಿಸಿದಂತೆ ಚೌಕಿದಾರ್ ಚೋರ್ ಹೈ ಎಂದು ಸುಪ್ರೀಂಕೋರ್ಟ್ ಹೇಳಿದೆ ಎಂಬ  ರಾಹುಲ್ ಗಾಂಧಿಯ ಆರೋಪ ಕುರಿತು ಸಲ್ಲಿಕೆಯಾಗಿದ್ದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ರಾಹುಲ್ ಗಾಂಧಿ ಕ್ಷಮೆಯಾಚನೆ ಯನ್ನು ಸ್ವೀಕರಿಸಿದ್ದು, ನ್ಯಾಯಾಂಗ ನಿಂದನೆ ಪ್ರಕರಣ ಕೈ ಬಿಟ್ಟಿರುವುದಾಗಿ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರಿಂದಾಗಿ ಹಿಂದಿನ ಎಐಸಿಸಿ ಅಧ್ಯಕ್ಷರಾಗಿದ್ದ ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ದೇಶದ ಜನತೆಯನ್ನು ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ನಂತರ ಕ್ಷೇತ್ರದ ಅಧ್ಯಕ್ಷರಾದ ಎಂ.ವಡಿವೇಲು ಮಾತನಾಡಿ ರಫೆಲ್ ಡೀಲ್ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸಿಜೆಐ ರಂಜನ್ ಗೋಗಯ್ ನೇತೃತ್ವದ ತ್ರಿಸದಸ್ಯ ಪೀಠ ರಾಹುಲ್ ಗಾಂಧಿಗೆ ಒಂದು ಕ್ಷಮೆ ಕೇಳಿ .ಇಲ್ಲವೇ ವಿಚಾರಣೆ ಎದುರಿಸಿ ಎಂದು ಸೂಚಿಸಿತ್ತು. ಬಳಿಕ ರಾಹುಲ್ ಗಾಂಧಿ ತಮ್ಮ ಹೇಳಿಕೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಅಲ್ಲದೆ ಸರ್ವೊಚ್ಛ ನ್ಯಾಯಾಲಯದಲ್ಲಿ ಅಫಿಡೆವಿಟ್ ಸಲ್ಲಿಸಿದ್ದರು.  ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ರಾಹುಲ್ ಗಾಂಧಿಯನ್ನು ತರಾಟೆಗೆ ತೆಗೆದುಕೊಂಡು ರಾಹುಲ್ ಗಾಂಧಿ ಹೇಳಿಕೆ ದುರಾದೃಷ್ಟಕರ. ಇನ್ನು ಮುಂದಾದರೂ ಜವಾಬ್ದಾರಿಯುತ ಹೇಳಿಕೆ ಗಳನ್ನು ನೀಡಿ ಎಂದು ಹೇಳಿದೆ. ಇನ್ನಾದರೂ ಬೇಕಾಬಿಟ್ಟಿ ಹೇಳಿಕೆಯನ್ನು ನೀಡುವ ಮೊದಲು ಯೋಚಿಸಿ ಅಂತ ಎಚ್ಚರಿಕೆ ನೀಡಿದೆ. ಆದರಿಂದಾಗಿ ರಾಹುಲ್ ಗಾಂಧಿಯವರು ಮತ್ತು ಕಾಂಗ್ರೆಸ್ ದೇಶದ ಜನತೆಯ ಮುಂದೆ ಬೇಷರತ್ತಾಗಿ ಕ್ಷಮೆಯಾಚಿಸುವಂತೆ ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಗರಪಾಲಿಕೆ ಸದಸ್ಯರುಗಳಾದ ಸೌಮ್ಯ ಉಮೇಶ್ .ಎಂ ಶಿವಕುಮಾರ .ಎಂ.ಸಿ.ರಮೇಶ್. ಕಿಟ್ಟಿ .ಸಂತೋಷ್ (ಶಂಭು). ಅಪ್ಪಿ ವಿಜಯ್ ಪ್ರಸನ್ನ ಗಿರಿ ರೇಖಾ .ಅನ್ನಪೂರ್ಣ. ಸೋಮಶೇಖರ್. ಸಿ.ಪಿ.ರಾಜೀವ್ . ನಾಗರಾಜ್ ರಾಜು .ಕಾರ್ಯಕರ್ತರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: