ಕ್ರೀಡೆಮೈಸೂರು

ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆ: ಕಥಾದಲ್ಲಿ ಅಭಿನವ್ ಕಿರಣ್ ದ್ವಿತೀಯ

ಮೈಸೂರು,ನ.17-ಒಕಿನವಾ ಕರಾಟೆ ಡು ಶೋರಿನ್ ರಿಯೂ ಕಾಯ್ ಇಂಡಿಯಾ ವತಿಯಿಂದ ಇಂದು ಮೈಸೂರು ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ಸಭಾಂಗಣದಲ್ಲಿ 19ನೇ ಶೋರಿನ್ ಕೈ ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ರಾಷ್ಟ್ರಮಟ್ಟದ ಕರಾಟೆ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

ಚಾಂಪಿಯನ್ ಶಿಪ್ ನಲ್ಲಿ 10 ವರ್ಷದ ವಿಭಾಗದಲ್ಲಿ ಅಭಿನವ್ ಕಿರಣ್ ಕಥಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದಾರೆ. ಅಭಿನವ್ ಕಿರಣ್ ರಾಯಲ್ ಕಾಂಕಾರ್ಡ್ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

ಕಾರ್ಯಕ್ರಮದಲ್ಲಿ ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಆರ್.ರಾಜು, ಜಿಲ್ಲಾ ಪತ್ರಕರ್ತರ ಸಂಘದ ನಿರ್ದೇಶಕ ಸಿ.ಎಂ.ಕಿರಣ್ ಕುಮಾರ್, ಡಾ.ಎಸ್.ಸುದೇಶ್ ಕುಮಾರ್ ಇತರರು ಉಪಸ್ಥಿತರಿದ್ದರು. (ಎಂ.ಎನ್)

Leave a Reply

comments

Related Articles

error: