ಪ್ರಮುಖ ಸುದ್ದಿ

ಕುಶಾಲನಗರ ರಥೋತ್ಸವದ ಪ್ರಯುಕ್ತ ಸಾಮೂಹಿಕ ಪೂಜೆ

ರಾಜ್ಯ(ಮಡಿಕೇರಿ) ನ.18:-  ಕುಶಾಲನಗರದ ಐತಿಹಾಸಿಕ ಶ್ರೀಗಣಪತಿ ದೇವಾಲಯದ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಪ್ರಯುಕ್ತ ಪಟ್ಟಣದ ಎಲ್ಲಾ ದೇವಾಲಯ ಸಮಿತಿಗಳನ್ನೊಳಗೊಂಡ ಕುಶಾಲನಗರ ದೇವಾಲಯಗಳ ಒಕ್ಕೂಟದ ಪ್ರತಿನಿಧಿಗಳು ಶ್ರೀಗಣಪತಿ ದೇವಾಲಯಕ್ಕೆ ಫಲ ತಾಂಬೂಲ ನೀಡಿ ಸಾಮೂಹಿಕವಾಗಿ ವಿಶೇಷ ಪೂಜೆ ಸಲ್ಲಿಸಿದರು.

ನಾಡಿನ ಭವಿಷ್ಯ ಉಜ್ವಲವಾಗಲಿ ಮತ್ತು ರಥೋತ್ಸವ ಯಶಸ್ವಿಯಾಗಿ ನಡೆಯಲಿ ಎಂದು ಪ್ರಾರ್ಥಿಸಿದರು. ಒಕ್ಕೂಟದ ಅಧ್ಯಕ್ಷ ಎಂ.ಕೆ.ದಿನೇಶ್ ಮತ್ತಿತರರು ಹಾಜರಿದ್ದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: